ಉಡುಪಿ; ಮನೆ ಮಂಜೂರಾತಿಗೆ ಆಗ್ರಹ

Update: 2017-12-13 16:40 GMT

ಉಡುಪಿ, ಡಿ.13: ಬಸವ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಿಗಬೇಕಾದ ಮನೆಗಳು ಮಂಜೂರಾಗಿದ್ದರೂ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು ಎಂದು ಕಾಪು ಶಾಸಕ ವಿಯಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವ ವಸತಿ ಯೋಜನೆಯಡಿಯಲ್ಲಿ 2013-14ರಿಂದ ಈ ವರ್ಷದವರೆಗೆ ಮನೆ ಮಂಜೂರಾಗುತಿದ್ದರೂ ಅದು ಫಲಾನುಭವಿಗಳಿಗೆ ಲಭಿಸುವಲ್ಲಿ ವಿಳಂಬ ವಾಗುತ್ತಿದೆ. 2000ಕ್ಕೂ ಅಧಿಕ ಮನೆಗಳು ವಿತರಣೆಗೆ ಬಾಕಿ ಇರುವಾಗ ರಾಜ್ಯದಲ್ಲಿ ಹೊಸ ಯೋಜನೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ. ವಿಳಂಬ ವಾಗುತ್ತಿರುವುದಕ್ಕೆ ಕಾರಣವೇನು ಎಂದು ಸೊರಕೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಆಧಾರ್ ಲಿಂಕಿನ ಸಮಸ್ಯೆಯಿಂದಾಗಿ ಮನೆ ಮಂಜೂರಾತಿಗೆ ವಿಳಂಬವಾಗುತ್ತಿದೆ ಎಂದರು. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸೊರಕೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News