ಹಿಮಪಾತದಿಂದ ನಾಪತ್ತೆಯಾಗಿರುವ ಮೂರು ಯೋಧರ ಪತ್ತೆಗೆ ಸೇನಾ ತಂಡ

Update: 2017-12-13 17:04 GMT

ಶ್ರೀನಗರ, ಡಿ.13: ಹಿಮಪಾತದಿಂದಾಗಿ ನಾಪತ್ತೆಯಾಗಿರುವ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣರೇಖೆಯ ಸಮೀಪದ ಗುರೇಝ್ ಸೆಕ್ಟರ್‌ನ ಸೇನಾ ಶಿಬಿರದ ಮೂವರು ಯೋಧರ ಪತ್ತೆಗಾಗಿ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್‌ನ (ಎಚ್‌ಎಡಬ್ಲೂಎಸ್) ತಂಡವನ್ನು ಸೇನೆಯು ಬುಧವಾರ ನಿಯೋಜಿಸಿದೆ.

ಮಂಗಳವಾರ ಸಂಭವಿಸಿದ್ದ ಹಿಮಪಾತದಲ್ಲಿ ಭಾರತೀಯ ಸೇನೆಯ ಮೂವರು ಯೋಧರು ನಾಪತ್ತೆಯಾಗಿದ್ದರು. ಇವರ ಪತ್ತೆಗಾಗಿ ಸೋನಾಮಾರ್ಗ್‌ನ ಎಚ್‌ಎಡಬ್ಲೂಎಸ್ ತಂಡವನ್ನು ಬಂಡಿಪೊರ ಜಿಲ್ಲೆಯ ನಿಯಂತ್ರಣ ರೇಖೆಯ ಬಳಿ ನಿಯೋಜಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಎಚ್‌ಎಡಬ್ಲೂಎಸ್ ಎತ್ತರದ ಪ್ರದೇಶಗಳು, ಹಿಮಚ್ಛಾದಿತ ಪ್ರದೇಶಗಳು ಮತ್ತು ಹಿಮಗಲ್ಲುಗಳ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ತರಬೇತಿ ನೀಡುವ ಸೇನೆಯ ವಿಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News