ಮಲ್ಪೆಯಲ್ಲಿ ಗಾನ-ಯಾನ

Update: 2017-12-13 16:51 GMT

ಉಡುಪಿ, ಡಿ.13: ಕನ್ನಡ ಚಿತ್ರರಂಗ ಮತ್ತು ಅದರ ಸಾಹಿತ್ಯ ಸಂಗೀತ ಬೆಳೆದು ಬಂದ ಹಿನ್ನಲೆಗಳನ್ನು ವಿವರಿಸುವ, ಚಿತ್ರರಂಗದ ಇತಿಹಾಸ, ಹಿರಿಮೆ ಮತ್ತು ಕಾಲಘಟ್ಟಗಳ ಕೊಡುಗೆಯನ್ನು ನೆನೆಯುತ್ತಾ ಕನ್ನಡ ಚಲಚಿತ್ರ ಗೀತೆಗಳನ್ನು ಹಾಡಿ ರಂಜಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗಾನ-ಯಾನ ಕಾರ್ಯಕ್ರಮವನ್ನು ಉಡುಪಿಯಲ್ಲಿ ಹಮ್ಮಿಕೊಂಡಿದೆ.

ಡಿ.16ರಂದು ಸಂಜೆ 6:30ಕ್ಕೆಮಲ್ಪೆಬೀಚ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದರ ವೀಕ್ಷಣೆಗೆ ಮುಕ್ತ ಅವಕಾಶವಿದೆ. ಗಾನಚಂದ್ರಿಕಾ ಕಲ್ಚರಲ್ ಪೌಂಡೇಶನ್, ಬೆಂಗಳೂರಿನ ಗಾಯಕರಾದ ನಾಗಚಂದ್ರಿಕಾ, ದ್ರಾಕ್ಷಾಯಣಿ, ಶಶಿಧರ್ ಮತ್ತು ಉದಯ ಅಂಕೋಲ ಹಾಗೂ ವಾದ್ಯ ಸಂಗೀತದಲ್ಲಿ ರಾಜೇಶ್ ಶೆಟ್ಟಿ ಮತ್ತು ಬಳಗ ಕಾರ್ಯಕ್ರಮ ನಡೆಸಿಕೊಡಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News