ಕ್ಸಿನ್‌ಜಿಯಾಂಗ್ ನಿವಾಸಿಗಳ ಡಿಎನ್‌ಎ ಮಾದರಿಗಳ ಸಂಗ್ರಹ

Update: 2017-12-13 17:46 GMT

ಬೀಜಿಂಗ್, ಡಿ. 13: ಚೀನಾದ ಅಶಾಂತ ಕ್ಸಿನ್‌ಜಿಯಾಂಗ್ ವಲಯದಲ್ಲಿ 12ರಿಂದ 65 ವರ್ಷ ವಯಸ್ಸಿನ ಲಕ್ಷಾಂತರ ನಾಗರಿಕರ ಬಯೋಮೆಟ್ರಿಕ್ ಮಾಹಿತಿಗಳು ಮತ್ತು ಡಿಎನ್‌ಎ ಮಾದರಿಗಳನ್ನು ಅಧಿಕಾರಿಗಳು ಪಡೆಯುತ್ತಿದ್ದಾರೆ ಎಂದು ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಬುಧವಾರ ಬಿಡುಗಡೆ ಮಾಡಿದ ನೂತನ ವರದಿಯೊಂದರಲ್ಲಿ ಹೇಳಿದೆ.

ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಎಂಬುದಾಗಿ ಪರಿಗಣಿಸಲಾದ ಎಲ್ಲ ನಾಗರಿಕರಿಂದ ಇಂಥ ಮಾಹಿತಿಗಳನ್ನು ಪಡೆಯುವ ಕಡ್ಡಾಯ ಅಭಿಯಾನ ಜಾರಿಯಲ್ಲಿದೆ ಎಂದು ವರದಿ ತಿಳಿಸಿದೆ.

ಅಧಿಕಾರಿಗಳು ವಿವಿಧ ರೀತಿಗಳಲ್ಲಿ ಬಯೋಮೆಟ್ರಿಕ್ ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News