ಡಿ. 16-17: ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕುಂದಾಪುರ, ಡಿ.14: ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ- ಬೈಂದೂರು ಘಟಕದ ವತಿಯಿಂದ ಕುಂದಾಪುರ ತಾಲೂಕಿನ 16ನೆ ಕನ್ನಡ ಸಾಹಿತ್ಯ ಸಮ್ಮೇಳನ ‘ಭುಮಿಗೀತ- 2017’ ಹಕ್ಲಾಡಿಯ ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯಲ್ಲಿ ಡಿ.16 ಮತ್ತು 17ರಂದು ನಡೆಯಲಿದೆ.
ಡಿ.16ರಂದು ಅಪರಾಹ್ನ 3ಗಂಟೆಗೆ ನಿವೃತ್ತ ಮುಖ್ಯ ಶಿಕ್ಷಕ ಬಿ.ರಾಜೀವ ಶೆಟ್ಟಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕ, ಹಿರಿಯ ಸಾಂಸ್ಕೃತಿಕ ಧುರೀಣ ಬಿ.ಅಪ್ಪಣ್ಣ ಹೆಗ್ಡೆ ವಹಿಸಲಿರುವರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೊದಲ ದಿನ ಹೆಣ್ಣಿನ ಸ್ವಾತಂತ್ರ್ಯ ಏನು..ಏಕೆ..ಹೇಗೆ? ಹಾಗೂ ಯಕ್ಷಗಾನ ಸಾಹಿತ್ಯ ಸಿರಿ ವಿಚಾರಗೋಷ್ಠಿ ನಡೆಯಲಿದೆ. ಡಿ.17ರ ಅಪರಾಹ್ನ 3ಗಂಟೆಗೆ ವಿಚಾರಗೋಷ್ಠಿಯಲ್ಲಿ ಕೃಷಿ ಮತ್ತು ನೀರಿನ ಮಿತವ್ಯಯದ ಕುರಿತು ಪರಿಸರವಾದಿ ಶ್ರೀಪಡ್ರೆ ಮಾತನಾಡಲಿರುವರು. ಸಂಜೆ 4 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಪ್ರಧಾನ ಸಂಚಾಲಕ ಸಂತೋಷ ಕುಮಾರ ಶೆಟ್ಟಿ, ಗೌರವ ಕಾರ್ಯದರ್ಶಿ ಡಾ.ಕಿಶೋರ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.