ಹಿರಿಯಡ್ಕ ದೇವಸ್ಥಾನ ಗರ್ಭಗುಡಿಗೆ ಶಿಲಾನ್ಯಾಸ
ಹಿರಿಯಡ್ಕ, ಡಿ.14: ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಶ್ರೀಬ್ರಹ್ಮಲಿಂಗೇಶ್ವರ ದೇವರ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ಗುರುಾರ ಬೆಳಗ್ಗೆ 11:50ಕ್ಕೆ ನಡೆಯಿತು.
ಲಕ್ಷ್ಮೀನಾರಾಯಣ ತಂತ್ರಿ ಹಾಗು ಗುರುರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಶ್ರೀಬ್ರಹ್ಮಲಿಂಗೇಶ್ವರ ದೇವರ ಗರ್ಭಗೃಹ, ಶಿಲಾಮಯ ಸುತ್ತುಪೌಳಿ ಹಾಗೂ ಸ್ವಾಗತ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ ಜರಗಿತು.
ಕಾಪು ಶಾಸಕ ವಿನಯಕುಮಾರ್ ಸೊರಕೆ, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಗೋವರ್ಧನದಾಸ್ ಹೆಗ್ಡೆ, ಅಧ್ಯಕ್ಷರಾದ ಹರ್ಷವರ್ಧನ ಹೆಗ್ಡೆ, ಅರುಣಾಚಲ ಶೆಟ್ಟಿ, ಚಂದ್ರಶೇಖರ ರಾವ್, ಎನ್.ಬಿ. ಶೆಟ್ಟಿ ಮುಂಬೈ, ಶಾಂತಾರಾಮ್ ಸೂಡ, ಜಯರಾಜ್ ಹೆಗ್ಡೆ ಮಣಿಪಾಲ, ಶಿವಪ್ರಸಾದ್ ಹೆಗ್ಡೆ ಹಿರೇಬೆಟ್ಟು, ಸುಭಾಶ್ಚಂದ್ರ ಹೆಗ್ಡೆ ಅಂಜಾರುಬೀಡು ಇವರು ಶಿಲಾನ್ಯಾಸವನ್ನು ನೆರವೇರಿಸಿದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಸುಭಾಶ್ಚಂದ್ರ ಹೆಗ್ಡೆ, ಕಾರ್ಯದರ್ಶಿ ಅಮರನಾಥ ಶೆಟ್ಟಿ, ಆಡಳಿತಾಧಿಕಾರಿ ಎಚ್.ಕೃಷ್ಣಮೂರ್ತಿ, ತಂತ್ರಿ ವರ್ಗ, ಅರ್ಚಕರು, ಜೀರ್ಣೋದ್ದಾರ ಸಮಿತಿ ಸದಸ್ಯರು ಹಾಗೂ ಭಾರೀ ಸಂಖ್ಯೆಯ ಭಕ್ತಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇನ್ನು ಡಿ.27ರಂದು ಬೆಳಗ್ಗೆ 9:30ಕ್ಕೆ ನಿಧಿಕುಂಭ ಸ್ಥಾಪನೆ ಹಾಗೂಅದೇ ದಿನ ಸಂಜೆ 7:30ಕ್ಕೆ ಗರ್ಭನ್ಯಾಸ ಕಾರ್ಯಕ್ರಮ ನಡೆಯಲಿದೆ. ನಾಳೆಯಿಂದ ಬರುವ 120 ದಿನಗಳ ಒಳಗೆ 12ಕೋಟಿ ರೂ.ಗಳ ಕಾಮಗಾರಿ ಪೂಣಗೊಳಿಸಲು ಚಾಲನೆ ನೀಡಲಾಗುವುದೆಂದು ಜೀರ್ಣೋದ್ದಾರ ಸಮಿತಿ ಪ್ರಕಟಣೆ ತಿಳಿಸಿದೆ.