ಡಿ.19ಕ್ಕೆ ಸ್ವೀಪ್ ರಸಪ್ರಶ್ನೆ ಕಾರ್ಯಕ್ರಮ
ಉಡುಪಿ, ಡಿ.14: ಜಿಲ್ಲೆಯ 18 ವರ್ಷ ಮೇಲ್ಪಟ್ಟ ಯುವ ಜನತೆಯನ್ನು ಮತದಾರರ ಪಟ್ಟಿಗೆ ಸೇರ್ಪಡೆ ಸಂಬಂಧ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸಲು ಮುಖ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರವನ್ನು ಡಿ.19ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಏರ್ಪಡಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಡಿ.19ರಂದು ಬೆಳಗ್ಗೆ ಬೋರ್ಡ್ ಹೈಸ್ಕೂಲ್‌ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.ಅಥವಾ ಮೊಬೈಲ್: 9448547870 ಗೆ ಕರೆ ಮಾಡಿ ಹೆಸರು ಸೇರ್ಪಡೆಗೊಳಿಸಬಹುದು.
ಆಸಕ್ತ ವಿದ್ಯಾರ್ಥಿಗಳು ಡಿ.19ರಂದು ಬೆಳಗ್ಗೆ ಬೋರ್ಡ್ ಹೈಸ್ಕೂಲ್‌ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.ಅಥವಾ ಮೊಬೈಲ್: 9448547870 ಗೆ ಕರೆ ಮಾಡಿ ಹೆಸರು ಸೇರ್ಪಡೆಗೊಳಿಸಬಹುದು. ಜಿಲ್ಲಾ ಮಟ್ಟದಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ.2,000, ದ್ವಿತೀಯ ಬಹುಮಾನ ರೂ.1,000, ರಾಜ್ಯಮಟ್ಟದಲ್ಲಿ ವಿಜೇತರಿಗೆ ಕ್ರಮವಾಗಿ 10,000ರೂ. ಹಾಗೂ 5,000ರೂ ನಗದು ಬಹುಮಾನ ದೊರೆಯಲಿದೆ.
ಜಿಲ್ಲಾ ಮಟ್ಟದಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ.2,000, ದ್ವಿತೀಯ ಬಹುಮಾನ ರೂ.1,000, ರಾಜ್ಯಮಟ್ಟದಲ್ಲಿ ವಿಜೇತರಿಗೆ ಕ್ರಮವಾಗಿ 10,000ರೂ. ಹಾಗೂ 5,000ರೂ ನಗದು ಬಹುಮಾನ ದೊರೆಯಲಿದೆ. ಈ ಸಂಬಂಧ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ರಸಪ್ರಶ್ನೆ ಆಯೋಜನೆಗೆ ಸಂಬಂಧ ವಿವಿಧ ಇಲಾಖೆಗಳಿಗೆ ವಿಚಾರ ವಿನಿಮಯ ನಡೆಸಿ ವಿವಿಧ ಹೊಣೆಗಾರಿಕೆಯನ್ನು ವಹಿಸಲಾಯಿತು.
ಸಭೆಯಲ್ಲಿ ಡಿಡಿಪಿಯು ವಿಜಯಲಕ್ಷ್ಮೀ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಬಿಸಿಎಂ ಅಧಿಕಾರಿ ಹರೀಶ್ ಗಾಂವ್ಕರ್, ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.