ಉಡುಪಿ: ಬಟ್ಟೆ ಬ್ಯಾನರ್‌ಗಳಿಗೆ ಮಾತ್ರ ಅವಕಾಶ

Update: 2017-12-14 15:38 GMT

ಉಡುಪಿ, ಡಿ.14: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ಸಭೆ, ಸಮಾರಂಭ ಹಾಗೂ ಶುಭ ಕೋರುವ ಕಾರ್ಯಕ್ರಮಗಳ ಬಗ್ಗೆ ಬಟ್ಟೆ ಬ್ಯಾನರ್ ಗಳನ್ನು ಮಾತ್ರ ಅಳವಡಿಸಬೇಕು. ಹಾಗೂ 1ರಿಂದ 5 ಬ್ಯಾನರ್ಸ್‌ಗಳನ್ನು ಅಳವಡಿಸಲು 10,000 ರೂ., 6ರಿಂದ 10 ಬ್ಯಾನರ್ಸ್‌ಗಳಿಗೆ 20,000ರೂ. ಮುಂಗಡ ಠೇವಣಿ ನೀಡಿ ಅನುಮತಿ ಪಡೆದ ನಂತರ ಅನುಮತಿ ನಂಬ್ರ ದಾಖಲಿಸಿ ಬ್ಯಾನರ್‌ಗಳನ್ನು ಅಳವಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸ ಲಾಗಿದೆ.

ಅನುಮತಿ ಪಡೆದುಕೊಂಡಿರುವುದಕ್ಕಿಂತ ಹೆಚ್ಚಿನ ಬ್ಯಾನರ್‌ಗಳನ್ನು ಅಳವಡಿಸಿರುವುದು ಕಂಡು ಬಂದಲ್ಲಿ ಹಾಗೂ ಅವಧಿಯೊಳಗೆ ತೆರವು ಮಾಡದಿದ್ದಲ್ಲಿ ಮುಂಗಡ ಠೇವಣಿಯನ್ನು ನಗರಸಭಾ ನಿಧಿಗೆ ಜಮೆ ಮಾಡಿಕೊಂಡು, ಕರ್ನಾಟಕ ಓಪನ್ ಪ್ಲೇಸಸ್ ಪ್ರಿವೆನ್‌ಶನ್ ಆಫ್ ಡಿಸ್‌ಪಿಗರ್‌ಮೆಂಟ್ ಕಾಯ್ದೆ 1981ರ ರೀತ್ಯಾ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಉಡುಪಿ ನಗರಸಭಾ ಪೌರಾಯುಕ್ತ ಡಿ. ಮಂಜುನಾಥಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News