×
Ad

ಡಿ.24: ಎಸ್‌ವೈಎಸ್‌ನಿಂದ ಕೆ.ಸಿ.ರೋಡ್ ಸೆಂಟರ್ ವತಿಯಿಂದ ಸರಳ ವಿವಾಹ

Update: 2017-12-14 21:11 IST

ಮಂಗಳೂರು, ಡಿ.14: ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ವತಿಯಿಂದ 6ನೆ ವರ್ಷದ ಸಾಮೂಹಿಕ ಸರಳ ವಿವಾಹವು ಡಿ.24ರಂದು ಬೆಳಗ್ಗೆ 10ಕ್ಕೆ ಕೋಟೆಕಾರ್‌ನ ನೂರ್‌ಮಹಲ್‌ನಲ್ಲಿ ಜರಗಲಿದೆ.

ಜಾಮೀಯಾ ಸಅದಿಯಾ ಪ್ರೊ. ಅಲ್‌ಹಾಜ್ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್‌ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಖಾಹ್‌ನ ನೇತೃತ್ವ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಿಟಿಎಂ ಸೈಯದ್ ಮುಹಮ್ಮದ್ ಸಲೀಂ ಅಸ್ಸಖಾಫ್ ತಂಙಳ್ ಕೆ.ಸಿ.ರೋಡ್, ಸಚಿವ ಯು.ಟಿ.ಖಾದರ್, ಅಲ್‌ಹಾಜ್ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ, ಅಲ್‌ಹಾಜ್ ಎಂಎಸ್ಸೆಎಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್, ಅಲ್‌ಹಾಜ್ ಉಸ್ಮಾನ್ ಸಅದಿ ಪಟ್ಟೋರಿ, ಅಲ್‌ಹಾಜ್ ಯು.ಬಿ. ಮುಹಮ್ಮದ್ ಭಾಗವಹಿಸಲಿದ್ದಾರೆ ಎಂದು ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್.ಉಮರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News