×
Ad

ಎಸ್ಸೆಸೆಫ್ ತೊಕ್ಕೊಟ್ಟು ಸೆಕ್ಟರ್: ಮದುವೆಗೆ ನೆರವು

Update: 2017-12-14 21:17 IST

ಮಂಗಳೂರು, ಡಿ.14: ಎಸ್ಸೆಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ಅರ್ಹ ಕುಟುಂಬದ ಹೆಣ್ಣಿನ ಮದುವೆಗೆ 30,000 ರೂ. ಮೌಲ್ಯದ ವಸ್ತ್ರವನ್ನು ಮುಂಡೊಲಿಯ ರಫೀಕ್ ಪ್ಯಾಲೇಸ್‌ನಲ್ಲಿ ಸುನ್ನಿ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಉಪಾಧ್ಯಕ್ಷ ಶೈಖುನಾ ಎಂ. ಅಲಿಕುಂಞಿ ಉಸ್ತಾದ್ ವಿತರಿಸಿದರು.

ಈ ಸಂದರ್ಭ ಎಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸೈಯದ್ ಖುಬೈಬ್ ತಂಙಳ್, ದ.ಕ. ಜಿಲ್ಲಾ ವಕ್ಫೃ್ ಸಲಹಾ ಸಮಿತಿಯ ಸದಸ್ಯ ಅಲ್ತಾಫ್ ಉಳ್ಳಾಲ, ತೊಕ್ಕೊಟ್ಟು ಸೆಕ್ಟರ್ ಕಾರ್ಯದರ್ಶಿ ಮನ್ಸೂರ್, ದಾರಂದ ಬಾಗಿಲು ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಸಖಾಫಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News