ಪನಾಮಾ ಪೇಪರ್ ಸೋರಿಕೆ: 46 ಭಾರತೀಯರಿಗೆ ಇ.ಡಿ ನೊಟೀಸ್

Update: 2017-12-14 16:02 GMT

ಹೊಸದಿಲ್ಲಿ, ಡಿ.14: ಪನಾಮಾ ಪೇಪರ್ಸ್‌ನಲ್ಲಿ ಹೆಸರಿಸಲಾಗಿರುವ 46 ಭಾರತೀಯರ ವಿರುದ್ಧ ಸಂಭಾವ್ಯ ಫಾರೆಕ್ಸ್ ಕಾನೂನು ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯವು ನೊಟೀಸ್ ಜಾರಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಫಾರೆಕ್ಸ್ ಎಕ್ಸ್‌ಚೇಂಜ್ ನಿರ್ವಹಣಾ ಕಾಯ್ದೆ (ಫೆಮ) ದ ಸಂಭಾವ್ಯ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಪನಾಮಾ ಪೇಪರ್ಸ್‌ನಲ್ಲಿ ಹೆಸರು ಕಾಣಿಸಿಕೊಂಡಿರುವ 46 ಭಾರತೀಯರ ವಿರುದ್ಧ ಕ್ರಮಕೈಗೊಳ್ಳಬಹುದಾದಂತಹ ಪ್ರಕರಣಗಳ ತನಿಖೆಯನ್ನು ಜಾರಿ ನಿರ್ದೇಶನಾಲಯ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅತಿ ಶೀಘ್ರದಲ್ಲಿ ಕೇಂದ್ರ ತನಿಖಾ ಸಂಸ್ಥೆಯು ಮೂರು ಡಜನ್‌ಗೂ ಅಧಿಕ ಜನರ ವಿರುದ್ಧ ನೊಟೀಸ್ ಜಾರಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಪನಾಮಾ ಪೇಪರ್ಸ್‌ನ್ನು ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳ ಬಹುಸಂಸ್ಥೀಯ ಸಮೂಹ (ಮ್ಯಾಗ್) ದ ಸದಸ್ಯರಾಗಿರುವ ಕೇಂದ್ರ ಸಂಸ್ಥೆಯು ತೆಗದುಕೊಂಡಿರುವ ಕ್ರಮದ ಬಗ್ಗೆ ಸಮಿತಿಗೆ ವರದಿಯನ್ನು ಒಪ್ಪಿಸಲಿದ್ದು ಆ ವರದಿಯನ್ನು ಪರಿಶೀಲನೆಗಾಗಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 46 ಕ್ರಮಕೈಗೊಳ್ಳಬಹುದಾದ ಪ್ರಕರಣಗಳಲ್ಲಿ ಕೇವಲ ಕೆಲವು ಮಾತ್ರ ಗಂಭೀರ ಉಲ್ಲಂಘನೆಯ ಆರೋಪವನ್ನು ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News