‘ಮೌನವಲಯ’ ಶಿವಲಿಂಗದ ಮುಂಭಾಗಕ್ಕೆ ಸೀಮಿತ: ಎನ್‌ಜಿಟಿ ಸ್ಪಷ್ಟನೆ

Update: 2017-12-14 16:12 GMT

 ಹೊಸದಿಲ್ಲಿ, ಡಿ.14: ದಕ್ಷಿಣ ಕಾಶ್ಮೀರದ ಅಮರನಾಥ ಕ್ಷೇತ್ರದ ಬಳಿ ಭಜನೆ ಹಾಗೂ ಮಂತ್ರಪಠಣಕ್ಕೆ ಪ್ರತಿಬಂಧ ಹೇರಿ ಈ ಪ್ರದೇಶವನ್ನು ‘ಮೌನ ವಲಯ’ ಎಂದು ಘೋಷಿಸಿದ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ), ಮೌನ ವಲಯ ಕೇವಲ ಶಿವಲಿಂಗದ ಮುಂಭಾಗಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿದೆ.

 ಹಿಮದ ನೀರ್ಗಲ್ಲಿನಿಂದ ರಚನೆಯಾಗಿರುವ ‘ಶಿವಲಿಂಗ’ದ ಎದುರು ಮೌನ ಆಚರಿಸಬೇಕು . ಅಮರನಾಥ ಕ್ಷೇತ್ರ ಅಥವಾ ಮೆಟ್ಟಿಲಿನ ಪ್ರದೇಶದಲ್ಲಿ ಭಜನೆ, ಮಂತ್ರ ಪಠಿಸಲು ನಿರ್ಬಂಧವಿಲ್ಲ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತರ್ ಕುಮಾರ್ ನೇತೃತ್ವದ ಎನ್‌ಜಿಟಿ ಪೀಠವು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ. ಅಮರನಾಥ ಕ್ಷೇತ್ರವನ್ನು ‘ಮೌನ ವಲಯ’ ಎಂದು ಘೋಷಿಸಿದ್ದ ಹಸಿರು ನ್ಯಾಯಾಧಿಕರಣವು, ಇಲ್ಲಿ ಗಂಟೆ ಬಾರಿಸುವುದಕ್ಕೆ ಹಾಗೂ ಮಂತ್ರಪಠಣ, ಜಯಕಾರ ಘೋಷಿಸುವುದನ್ನು ಪ್ರತಿಬಂಧಿಸಿತ್ತು. ಅಲ್ಲದೆ ಯಾತ್ರಾರ್ಥಿಗಳು ಕಟ್ಟಕಡೆಯ ತನಿಖಾ ಕೇಂದ್ರದ ಬಳಿಕ ತಮ್ಮ ಮೊಬೈಲ್ ಫೋನ್‌ಗಳನ್ನೂ ಜತೆಗೆ ಕೊಂಡೊಯ್ಯುವಂತಿಲ್ಲ ಎಂದು ತಿಳಿಸಿತ್ತು. ಈ ಪ್ರದೇಶದಲ್ಲಿರುವ ನೀರ್ಗಲ್ಲುಗಳ ರಕ್ಷಣೆಗೆ ಇಂತಹ ಕ್ರಮಗಳು ಅತ್ಯಗತ್ಯ ಎಂದು ಎನ್‌ಜಿಟಿ ತಿಳಿಸಿತ್ತು.

ಇದನ್ನು ಪ್ರಶ್ನಿಸಿ ಪರಿಸರ ಹೋರಾಟಗಾರರಾದ ಗೌರಿ ಮೌಲೇಖಿ ಎಂಬವರು ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News