ಅಮಲು ಪದಾರ್ಥದ ದಾಸರಾಗದಿರಿ:ಲತೀಫ್ ಸಖಾಫಿ

Update: 2017-12-14 16:18 GMT

ಕಿನ್ನಿಗೋಳಿ, ಡಿ.14: ಹದಿಹರೆಯದ ಯುವಕರು ಅಮಲು ಪದಾರ್ಥದ ದಾಸರಾಗಿ, ಕುಕೃತ್ಯಗಳಲ್ಲಿ ಭಾಗಿಗಳಾಗುತ್ತಿರುವುದು ದುರಂತ. ಪ್ರವಾದಿ ಮುಹಮ್ಮದ್ (ಸ)ರವರ ಆಶಯಕ್ಕೆ ವಿರುದ್ಧವಾದ ನಡೆ ಇದಾಗಿದ್ದು, ಯುವಕರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪ್ರವಾದಿಯ ಸಂದೇಶವನ್ನು ಯುವಜನತೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ಕಿನ್ನಿಗೋಳಿ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಸಖಾಫಿ ಹೇಳಿದರು.

 ಮುಹಮ್ಮದಿಯ್ಯ ಜುಮ್ಮಾ ಮಸೀದಿ ಪುನರೂರು, ಮುಹಿಯುದ್ದೀನ್ ಯಂಗ್‌ಮೆನ್ಸ್ ಎಸೋಸಿಯೇಶನ್ ಹಾಗೂ ಮುಹಮ್ಮದಿಯ್ಯ್ ಮದ್ರಸದ ವತಿಯಿಂದ ಕಿನ್ನಿಗೋಳಿಯ ಗೋಳಿಜೋರ ಮದ್ರಸ ವಠಾರದಲ್ಲಿ ನಡೆದ ’ಮೀಲಾದ್ ಫೆಸ್ಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಿ.ಎಂ.ಎ. ಮುಹಮ್ಮದ್ ಅಶ್ರಫ್ ರಝಾ ಅಂಜದಿ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿಯ ಅಧ್ಯಕ್ಷ ಸಿದ್ದೀಕ್ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಅಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ ಅಸ್ಸಖಾಫಿ ಕಿಲ್ಲೂರು ತಂಙಳ್ ದುಆ ಆಶೀರ್ವಚನ ನೆರವೇರಿಸಿದರು.

ವೇದಿಕೆಯಲ್ಲಿ ಮಿಸ್ಬಾಹುಲ್ ಮದೀನಾ ವಿದ್ಯಾಸಂಸ್ಥೆಯ ಮ್ಯಾನೇಜರ್ ಹಸನ್ ಸಖಾಫಿ, ಮುಅಲ್ಲಿಂ ಸಜ್ಜಾದ್ ಆಲಂ ನೂರಿ, ಕೆಜೆಎಂ ಅಧ್ಯಕ್ಷ ಅಬ್ದುಲ್ ರಹ್ಮಾನ್, ಕಿನ್ನಿಗೋಳಿ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಯಂಗ್‌ಮೆನ್ಸ್ ಅಧ್ಯಕ್ಷ ಉಮರುಲ್ ಫಾರೂಕ್, ಇಖ್ಲಾಸ್ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಖಾದರ್, ಕೆ.ಎಂ.ಇಬ್ರಾಹೀಂ ರಿಝ್ವಿ, ಅಬ್ದುಲ್ ಖಾದರ್ ಮದನಿ, ಅಬ್ದುಲ್ ಹಮೀದ್ ಮಿಲನ್, ಕೆ.ಯು.ಮುಹಮ್ಮದ್ ನೂರಾನಿಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News