ಯುನಿವೆಫ್: ಡಿ. 15ರಂದು ಬಜ್ಪೆಯಲ್ಲಿ ಪ್ರವಾದಿ ಅಭಿಯಾನದ ಸಭೆ
Update: 2017-12-14 22:07 IST
ಮಂಗಳೂರು, ಡಿ. 14: ಯುನಿವೆಫ್ ಕರ್ನಾಟಕ ಫೆಬ್ರವರಿ 2 ರ ವರೆಗೆ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು 'ಪ್ರವಾದಿ ಸಂದೇಶ ಪ್ರಚಾರ ಅಭಿಯಾನ'ದ ಪ್ರಥಮ ಸಾರ್ವಜನಿಕ ಕಾರ್ಯಕ್ರಮವು ಡಿ.15ರಂದು ಸಂಜೆ 6.45ಕ್ಕೆ ಬಜ್ಪೆ ಪೆಟ್ರೋಲ್ ಪಂಪ್ ಬಳಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು 'ಪ್ರವಾದಿ ಪ್ರೇಮ ಮತ್ತು ಮೋಕ್ಷದ ಮಾರ್ಗ' ಎಂಬ ವಿಷಯದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಯುನಿವೆಫ್ ಜಿಲ್ಲಾಧ್ಯಕ್ಷ ಸೈಫುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.