×
Ad

ಕೊಲೆಯತ್ನ ಪ್ರಕರಣ: ಆರೋಪಿಗಳ ಖುಲಾಸೆ

Update: 2017-12-14 22:16 IST

ಪುತ್ತೂರು, ಡಿ. 14: ತಾಲೂಕಿನ ಪುರುಷರಕಟ್ಟೆ ಎಂಬಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

2014 ಸೆ. 14ರಂದು ಪುರುಷರಕಟ್ಟೆ ಸಾಂದೀಪನಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಲೀಮುದ್ದೀನ್ ಎಂಬವರನ್ನು ರಿಕ್ಷಾದಲ್ಲಿ ಬಂದ ಆರೋಪಿಗಳ ತಂಡವು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಗಂಭಿರ ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಅವಿನಾಶ್, ಸುಭಾಶ್, ಚಂದ್ರನಾಥ್, ಕೀರ್ತೇಶ್, ಯಶವಂತ್ ಮತ್ತು ಮಂಜುನಾಥ್ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಇದೀಗ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.
ಅರೋಪಿ ಗಳ ಪರವಾಗಿ ನ್ಯಾಯವಾದಿಗಳಾದ ಕುಮಾರನಾಥ್ ಎಸ್, ಕೃಷ್ಣ ಪ್ರಸಾದ್ ರೈ ಹಾಗೂ ಚಿನ್ಮಯ್ ರೈ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News