×
Ad

ಕುಂದಾಪುರ: ಅಸಾಂಕ್ರಾಮಿಕ ರೋಗಗಳ ಮಾಹಿತಿ ಕಾರ್ಯಕ್ರಮ, ತಪಾಸಣೆ ಶಿಬಿರ

Update: 2017-12-14 22:46 IST

ಕುಂದಾಪುರ, ಡಿ. 14: ಅಸಾಂಕ್ರಾಮಿಕ ರೋಗಗಳ ಮಾಹಿತಿ ಕಾರ್ಯಕ್ರಮ ಹಾಗು ತಪಾಸಣೆ ಶಿಬಿರವು ಡಿ. 14ರಂದು ಬೆಳಗ್ಗೆ ಎನ್.ಎಮ್.ಎ. ಸೌಹಾರ್ದ ಭವನ ಎಂ.ಕೋಡಿಯಲ್ಲಿ ನಡೆಯಿತು.

ಕಾರ್ಯಕ್ರಮವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಎನ್.ಸಿ.ಡಿ. ಘಟಕ, ಉಡುಪಿ ಜಿಲ್ಲೆ ತಾಲೂಕು ಸಾರ್ವಜನಿಕ ಆಸ್ಪತ್ರೆ, ಎನ್.ಸಿ.ಡಿ. ವಿಭಾಗ, ಕುಂದಾಪುರ ವಿಶ್ವ ಮಧುಮೇಹ ಪ್ರತಿಷ್ಠಾನ, ಮಣಿಪಾಲ ವಿಶ್ವವಿದ್ಯಾನಿಲಯ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಕುಂದಾಪುರ ರೋಟರಿ ಕ್ಲಬ್, ಕುಂದಾಪುರ ಸನ್ ರೈಸ್ ಹಾಗು ನುಸ್ರತುಲ್ ಮಸಾಕೀನ್ ಎಸೋಸಿಯೇಶನ್ ಎಂ.ಕೋಡಿ ಕುಂದಾಪು ಇದರ ಸಂಯುಕ್ತ ಆಶ್ರಯದಲ್ಲಿ ನಡೆಯಿತು.

ಎನ್.ಎಂ.ಎ. ಎಂ.ಕೋಡಿ ಕುಂದಾಪುರ ಅಧ್ಯಕ್ಷ ಜಿ. ಸರ್ ದಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸರ್ವೇಶಿಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ,  ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಮಣಿಪಾಲ ವಿಶ್ವವಿದ್ಯಾಲಯದ ಪ್ರಭಾತ್ ಕಲ್ಲೂರ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಪಿ.ಎಚ್.ಎಫ್. ಅಜಿತ್ ಕೆ. ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News