ದಿಗ್ಬಂಧನೆಯ ಸಂಪೂರ್ಣ ಜಾರಿಯಿಂದ ಉ. ಕೊರಿಯ ಸರಿದಾರಿಗೆ

Update: 2017-12-14 17:21 GMT

ಟೋಕಿಯೊ, ಡಿ. 14: ಉತ್ತರ ಕೊರಿಯದ ಬೆಳೆಯುತ್ತಿರುವ ಕ್ಷಿಪಣಿ ಮತ್ತು ಪರಮಾಣು ಪರೀಕ್ಷೆಯ ದಾಹವನ್ನು ತಡೆಯಲು ಅದರ ವಿರುದ್ಧ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಸಂಘಟಿತ ಕ್ರಮಗಳನ್ನು ತೆಗೆದುಕೊಳ್ಳುವುದೇ ಪರಿಹಾರವಾಗಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಗುರುವಾರ ಹೇಳಿದ್ದಾರೆ.

ಟೋಕಿಯೊದಲ್ಲಿ ಪ್ರಧಾನಿ ಶಿಂಝೊ ಅಬೆಯನ್ನು ಭೇಟಿಯಾದ ವೇಳೆ ಅವರು ಈ ಮಾತುಗಳನ್ನು ನುಡಿದರು. ವಲಯದ ಶಾಂತಿ ಮತ್ತು ಸ್ಥಿರತೆಗಾಗಿ ಉತ್ತರ ಕೊರಿಯವನ್ನು ಪರಮಾಣುಮುಕ್ತಗೊಳಿಸುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಾಗತಿಕ ಆರೋಗ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಮ್ಮೇಳನವೊಂದರಲ್ಲಿ ಭಾಗವಹಿಸುವುದಕ್ಕಾಗಿ ಅವರು ಟೋಕಿಯೊಗೆ ಆಗಮಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉತ್ತರ ಕೊರಿಯ ಮಾತ್ರವಲ್ಲ, ಇತರ ದೇಶಗಳೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News