×
Ad

ಬರ್ಮುಡ: ಸಲಿಂಗ ಮದುವೆಗೆ ಮತ್ತೆ ನಿಷೇಧ

Update: 2017-12-14 22:53 IST

ವಾಶಿಂಗ್ಟನ್, ಡಿ. 14: ಬರ್ಮುಡದ ಸುಪ್ರೀಂ ಕೋರ್ಟ್ ಈ ವರ್ಷದ ಆರಂಭದಲ್ಲಿ ನೀಡಿದ್ದ ಸಲಿಂಗ ವಿವಾಹದ ಹಕ್ಕನ್ನು ದೇಶದ ಸೆನೆಟರ್‌ಗಳು ಬುಧವಾರ ರದ್ದುಪಡಿಸಿದ್ದಾರೆ.

ಸಲಿಂಗ ವಿವಾಹದ ಮೇಲಿನ ನಿಷೇಧವನ್ನು ಮರಳಿ ಜಾರಿಗೆ ತರುವ ಡೊಮೆಸ್ಟಿಕ್ ಪಾರ್ಟ್‌ನರ್‌ಶಿಪ್ ಕಾಯ್ದೆಯನ್ನು ಸೆನೆಟ್ 8-3 ಮತಗಳ ಅಂತರದಿಂದ ಅಂಗೀಕರಿಸಿದೆ.

ಬರ್ಮುಡದ ಕೆಳಮನೆ ಹೌಸ್ ಆಫ್ ಅಸೆಂಬ್ಲಿ ಈ ಮಸೂದೆಯನ್ನು ಕಳೆದ ಶುಕ್ರವಾರ 24-10 ಮತಗಳ ಅಂತರದಿಂದ ಅಂಗೀಕರಿಸಿತ್ತು. ಇನ್ನು ಈ ಮಸೂದೆಗೆ ಗವರ್ನರ್‌ರ ಅಂಕಿತ ಬೀಳುವುದಷ್ಟೇ ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News