ಡಿ. 16: ಸುಳ್ಯದಲ್ಲಿ ಸಲಫಿ ಸಮಾವೇಶ
Update: 2017-12-15 17:31 IST
ಮಂಗಳೂರು, ಡಿ. 15: “ ಧರ್ಮ: ಸಹಿಷ್ಣುತೆ, ಸಹಬಾಳ್ವೆ, ಶಾಂತಿ “ ಎಂಬ ಧ್ಯೇಯವಾಕ್ಯದಡಿ ಕೆ.ಎನ್.ಎಂ.ನ ವತಿಯಿಂದ ಡಿಸೆಂಬರ್ ಕೊನೆಯಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಕೂರಿಯಾಡ್ ಎಂಬಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮುಜಾಹಿದ್ ಸಮ್ಮೇಳನದ ಪ್ರಚಾರಾರ್ಥ ಎಸ್.ಕೆ.ಎಸ್.ಎಂ.ನ ಸುಳ್ಯ ಘಟಕದ ಆಶ್ರಯದಲ್ಲಿ ಡಿ.16 ರಂದು ಸಂಜೆ ಗಂಟೆ 4:30 ಕ್ಕೆ ಸುಳ್ಯದ ಗಾಂಧಿನಗರದಲ್ಲಿ ಸಲಫಿ ಸಮಾವೇಶವು ಜರಗಲಿದೆ.
ಈ ಸಮಾವೇಶದಲ್ಲಿ ಮೌಲವಿ ಬಾದುಶಾ ಬಾಖವಿ, ಮುಹಮ್ಮದ್ ಆಸಿಫ್ ಬಳ್ಳಾರಿ ಮತ್ತು ಮುಹಮ್ಮದ್ ಗುಲಾಂ ಮಂಗಳೂರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.