×
Ad

ಹಿಲಿಯಾಣ ಕುಡುಬಿ ಸಮುದಾಯ ಭವನ ವಶಕ್ಕೆ ಹುನ್ನಾರ: ಅಲ್ತಾರು ಕುಡುಬಿ ಸಮಾಜೋದ್ಧಾರಕ ಸಂಘ ಆರೋಪ

Update: 2017-12-15 20:34 IST

ಉಡುಪಿ, ಡಿ.15: ಅಲ್ತಾರು ಕುಡುಬಿ ಸಮಾಜೋದ್ಧಾರಕ ಸಂಘವು ಸರಕಾರ ಹಾಗೂ ಸಾರ್ವಜನಿಕರ ದೇಣಿಗೆಯಿಂದ ಹಿಲಿಯಾಣ ಆಮ್ರಕಲ್ಲುವಿನಲ್ಲಿ ನಿರ್ಮಿಸಿರುವ ಸಮುದಾಯ ಭವನವನ್ನು ಹಿಂದಿನ ಆಡಳಿತ ಮಂಡಳಿ, ಕಟ್ಟಡ ಸಮಿತಿಯ ಕೆಲವು ಪದಾಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಅನಧಿಕೃತ ಹಾಗೂ ಕಾನೂನು ಬಾಹಿರವಾಗಿ ವಶಪಡಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಎಂ.ಕೆ.ನಾಯ್ಕಾ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರೆಲ್ಲ ಅನಧಿಕೃತವಾಗಿ ಸಮುದಾಯ ಭವನದಲ್ಲಿ ಕಾರ್ಯಕ್ರಮಗಳನ್ನು ನಡೆ ಸುತ್ತಿದ್ದು, ಆದಾಯವನ್ನು ಸಂಘದ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿ ಕೊಂಡು ಸಂಘದ ಆದಾಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಈಗಿರುವ ಆಡಳಿತ ಮಂಡಳಿಯು ಕೆಲವೊಂದು ಕೊರತೆ, ನ್ಯೂನತೆಗಳನ್ನು ಸರಿಪಡಿಸುವಂತೆ ಹಾಗೂ ದಾಖಲೆಗಳನ್ನು ಒದಗಿಸುವಂತೆ ಹಿಂದಿನ ಆಡಳಿತ ಮಂಡಳಿಗಳ ಪದಾಧಿಕಾರಿಗಳಿಗೆ ನೋಟೀಸ್ ಜಾರಿ ನೀಡಿರುವುದನ್ನು ಅವ ಮಾನ ಎಂಬಂತೆ ಬಿಂಬಿಸಿ, ಸಂಘದ ಬಗ್ಗೆ ಅಪಪ್ರಚಾರ ಮಾಡಿ ಗೊಂದಲ ಸೃಷ್ಠಿಸುತ್ತಿದ್ದಾರೆ. ಸಂಘದ ನೋಂದಣಿ ನವೀಕರಣಕ್ಕೆ ತಡೆಯೊಡ್ಡಲಾಗಿದೆ ಎಂದು ಅವರು ತಿಳಿಸಿದರು.

ನ.18ರಂದು ಸಂಘದ ಕಾರ್ಯದರ್ಶಿ ಬೆಳ್ಳ ನಾಯ್ಕ ಕಚೇರಿಯಲ್ಲಿದ್ದ ವೇಳೆ ಸುಮಾರು 50ಮಂದಿ ಏಕಾಏಕಿ ನುಗ್ಗಿ ದಾಖಲೆಗಳ ಕಪಾಟಿನ ಕೀಯನ್ನು ಬಲವಂತವಾಗಿ ಕಿತ್ತುಕೊಂಡು ಕಚೇರಿ, ಸಮುದಾಯ ಭವನ ಮತ್ತು ದಾಖಲೆ ಪತ್ರ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ರಾಮ ನಾಯ್ಕಿ, ಉಪಾಧ್ಯಕ್ಷ ರಾಘು ನಾಯ್ಕಿ, ಜೊತೆ ಕಾರ್ಯದರ್ಶಿ ಚಂದ್ರಶೇಖರ್ ನಾಯ್ಕಿ, ಕಾರ್ಯದರ್ಶಿ ಬೆಳ್ಳ ನಾಯ್ಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News