ಶಿವಮೊಗ್ಗ ಇಹ್ಸಾನ್ ಸೆಂಟರ್ ಗೆ ಸಂಭ್ರಮದ ಚಾಲನೆ
ಶಿವಮೊಗ್ಗ, ಡಿ. 15: ಇಹ್ಸಾನ್ ಜಿಲ್ಲಾ ಸುನ್ನಿ ಸೆಂಟರ್ ಇದರ ಉದ್ಘಾಟನೆ ಸಮಾರಂಭ ವು ಇಹ್ಸಾನ್ ಕರ್ನಾಟಕ ಚೆಯರ್ಮನ್ ಮೌಲಾನ ಎನ್ ಕೆ ಶಾಪಿ ಸಅದಿ ಉಸ್ತಾದ್ ರವರ ಅಧ್ಯಕ್ಷತೆ ಯಲ್ಲಿ ಸಯ್ಯದ್ ಶಹೀದ್ದುದ್ದೀನ್ ತಂಙಲ್ ರವರ ದುಆ ದೂಂದಿಗೆ ಚಾಲನೆ ಗೊಂಡಿತು.
ಕಾರ್ಯಕ್ರಮವು ಎಸ್ಎಸ್ಎಫ್ ರಾಜಾಧ್ಯಕ್ಷ ಇಸ್ಮಾಯಿಲ್ ಸಖಾಪಿ ಕೊಂಡಗೇರಿ ಉದ್ಘಾಟಿಸಿದರು. ಸೈಯದ್ ಅಬೂಬಕರ್ ಸಿದ್ದೀಕ್ ತೀರ್ಥಹಳ್ಳಿ, ಸೈಯದ್ ಶಾಹುಲ್ ತಂಙಲ್ ತೀರ್ಥಹಳ್ಳಿ, ಹೈದರಲಿ ನಿಝಾಮಿ, ಕೆ ಸಿ ಎಫ್ ಕತರ ರಾಷ್ಟ್ರೀಯ ಅಧ್ಯಕ್ಷ ರಹೀಂ ಸಅದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವೋಕೇಟ್ ಇಲ್ಯಾಸ್ ಶುಭಕೋರಿದರು.
ರಾಜ್ಯ ಕಾರ್ಯದರ್ಶಿ ಸುಫಿಯಾನ್ ಸಖಾಪಿ, ಸದಸ್ಯರಾದ ಮುಸ್ತಫಾ ನಹೀಮಿ, ಇಸ್ಮಾಯಿಲ್ ಝೈನಿ ಕೊಡಗು, ಶಂಸುದ್ದೀನ್ ಶಿವಮೊಗ್ಗ, ಅಡ್ವೋಕೇಟ್ ಹಮೀದ್ ಮಡಿಕೇರಿ, ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಲ್ತಾಫ್ ಕುಂಪಲ ಉಪಸ್ಥಿತರಿದ್ದರು. ಇಹ್ಸಾನ್ ಕರ್ನಾಟಕ ರಾಜ್ಯ ಕನ್ವೀನರ್ ಅಬ್ದುಲ್ ರೆಹಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ, ಶಾಹುಲ್ ಹಮೀದ್ ಶಿವಮೊಗ್ಗ ವಂದಿಸಿದರು.