ಡಿ.16ರಿಂದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್‌ವತಿಯಿಂದ 'ಎಸ್ಸೆಸ್ಸೆಫ್ ಪ್ರತಿಭೋತ್ಸವ-17'
ಉಳ್ಳಾಲ, ಡಿ. 15: ಮರ್ಹೂಮ್ ಕಬೀರ್ ವೇದಿಕೆ, ಮಹಾತ್ಮಾ ಗಾಂಧಿ ರಂಗ ಮಂದಿರ, ಉಳ್ಳಾಲ ಪೇಟೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್‌ವತಿಯಿಂದ ರಾಜ್ಯದ ಅತೀ ದೊಡ್ಡ ಇಸ್ಲಾಮಿಕ್ ಕಲಾ-ಸಾಹಿತ್ಯಿಕ ಸಾಂಸ್ಕೃತಿಕ ಸ್ಪರ್ಧಾ ಕೂಟ (ಎಸ್ಸೆಸ್ಸೆಫ್ ಪ್ರತಿಭೋತ್ಸವ-17) ಕಾರ್ಯಕ್ರಮವು ಸೈಯದ್ ಖುಬೈಬ್ ತಂಙಳ್‌ರ ಅಧ್ಯಕ್ಷತೆಯಲ್ಲಿ ಡಿ.16 ಮತ್ತು 17ರಂದು 11ಶಾಖೆಗಳು, 6 ವಿಭಾಗಗಳು, 80 ವಿವಿದ ಸ್ಪರ್ಧೆಗಳು, ಮರ್ಹೂಮ್ ಅಮೀರ್ ಸುಹೈಲ್ ವೇದಿಕೆ, ಮರ್ಹೂಮ್ ಕಮರುದ್ದೀನ್ ಸುಂದರಿಭಾಗ್ ವೇದಿಕೆ ಮತ್ತು ಮರ್ಹೂಮ್ ಶಿಹಾಬ್ ಮೇಲಂಗಡಿ ಸ್ಕ್ವೇರ್ ವೇದಿಕೆಯಲ್ಲಿ ನಡೆಯಲಿದೆ.
ಡಿ.17 ಬೆಳಗ್ಗೆ 8ಗಂಟೆಗೆ ಉಳ್ಳಾಲ ಎಸ್ಸೆಸ್ಸೆಫ್ ಸ್ಥಾಪಕ ಅಧ್ಯಕ್ಷ ಅಲೇಕಳ ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಅಬೂಝಿಯಾದ್ ಪಟ್ಟಾಂಬಿ ಉಸ್ತಾದ್ ಧ್ವಜಾರೋಹನ ನೆರವೇರಿಸಲಿದ್ದಾರೆ.
ಉಳ್ಳಾಲ ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿ ಕೃಷ್ಣನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಹಾಜಿ ಯು.ಎಸ್. ಹಂಝ, ಶಿಹಾಬ್ ಸಖಾಫಿ ಉಳ್ಳಾಲ್, ಜಮಾಲ್ ಮುಸ್ಲಿಯಾರ್, ಹನೀಫ್ ಹಾಜಿ, ಜಲಾಲ್ ತಂಙಳ್, ಸಿರಾಜುದ್ದೀನ್ ಸಖಾಫಿ ಕನ್ಯಾನ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಶರೀಫ್ ಸಅದಿ,ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಯು.ಎಸ್.ಅಬೂಬಕ್ಕರ್ ಹಾಜಿ ಹಾಗೂ ಅಲ್ತಾಫ್ ಕುಂಪಲ, ಅಶ್ರಫ್ ಬಲ್ಲಾರಿ, ಸೀದಿಯಬ್ಬ, ಹಮೀದ್ ಮಂಚಿಲ, ಮುಹಮ್ಮದ್ ತೊಕ್ಕೊಟ್ಟು, ಅಶ್ರಫ್ ಯು.ಡಿ, ಇಸಾಕ್ ರಹ್ಮಾನಿಯ, ಮನ್ಸೂರ್ ದಾರಂದ ಬಾಗಿಲು, ಸದ್ದಾಮ್ ಪಟ್ಲ, ಸಮೀರ್ ಸೇವಂತಿಗುಡ್ಡೆ, ಪ್ರ.ಕಾರ್ಯದರ್ಶಿ ಮುಝಮ್ಮಿಲ್ ಮತ್ತು ಸ್ವಾಗತ ಸಮಿತಿಯ ಚೇರ್‌ಮ್ಯಾನ್ ಮುಸ್ತಫ ಮಾಸ್ಟರ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.