ಬೆಳ್ಳಂಪಳ್ಳಿ ದೇವಳದಲ್ಲಿ ಚಿನ್ನಾಭರಣ ಕಳವು
Update: 2017-12-15 22:00 IST
ಹಿರಿಯಡ್ಕ, ಡಿ.16: ಬೆಳ್ಳಂಪಳ್ಳಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಡಿ.14 ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ದೇವರ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಬಾಗಿಲ ಕೊಂಡಿಯನ್ನು ಮುರಿದು ಒಳ ನುಗ್ಗಿದ ಕಳ್ಳರು, ಬಳಿಕ ಗರ್ಭಗುಡಿಯ ಗ್ರಿಲ್ ಬೀಗ ಮತ್ತು ಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶಿಸಿ, ಲಾಕ್ ಹಾಕದ ಸೇಪ್ಟಿ ಲಾಕರ್‌ನಲ್ಲಿದ್ದ ಚಿನ್ನದ ಮುಖವಾಡ, ಚಿನ್ನದ ನೆಕ್ಲೇಸ್, 6 ಕರಿಮಣಿ ಸರ, 7 ಹರಳಿನ ಬೊಟ್ಟು, ಉಂಗುರ, 2 ತಾಳಿ, 2 ಚಿನ್ನದ ನಾಣ್ಯ, 2 ಸಣ್ಣ ಚಿನ್ನದ ಬ್ರೇಸ್ಲೆಟ್, ದೇವರ ಮೂರ್ತಿಯಲ್ಲಿದ್ದ ಎಂಟು ಕರಿಮಣಿ ಸರವನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನಾಭರಣಗಳ ತೂಕ 5ರಿಂದ 60 ಗ್ರಾಂಗಳಾಗಿದ್ದು ಇದರ ಮೌಲ್ಯ ಸುಮಾರು 1.60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆ ಯುತ್ತಿದೆ.