×
Ad

ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜೋಕಟ್ಟೆ ಶಾಖೆ ಉದ್ಘಾಟನೆ

Update: 2017-12-15 22:34 IST

ಮಂಗಳೂರು, ಡಿ.15: ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜೋಕಟ್ಟೆ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ಜೋಕಟ್ಟೆಯ ಸನ್‌ರೈಸ್ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ನಡೆಯಿತು.

ಕರ್ನಾಟಕ ಸಹಕಾರ ಮಹಾಮಂಡಳಿಯ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿ ಇಡಬೇಕು. ಠೇವಣಿಗೆ ಸೂಕ್ತ ಭದ್ರತೆ ನೀಡುವ ಹೊಣೆ ತನ್ನದಾಗಿದೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಜೋಕಟ್ಟೆ ಪರಿಸರ ಸಾಕಷ್ಟು ಅಭಿವೃದ್ಧಿ ಹೊಂದುತ್ತಿವೆ. ಇಲ್ಲಿ ಇಂತಹ ಸೊಸೈಟಿಯ ಅಗತ್ಯವಿತ್ತು. ಅದೀಗ ಈಡೇರಿದೆ. ಈ ಭಾಗದ ಜನರು ಇದಕ್ಕೆ ಬೆಂಬಲ ನೀಡಿದರೆ ಸೊಸೈಟಿ ಕೂಡ ಜನರ ಬೆಂಬಲಕ್ಕೆ ನಿಲ್ಲಲಿದೆ ಎಂಬ ವಿಶ್ವಾಸ ತನಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷ ಬಿ. ಇಬ್ರಾಹೀಂ ಈ ಹಿಂದೆ ಕಾಟಿಪಳ್ಳದಲ್ಲಿ ಶಾಖೆ ತೆರೆಯಲಾಗಿತ್ತು. ಇದೀಗ ಎರಡನೆ ಶಾಖೆಯನ್ನು ತೆರೆಯಲಾಗಿದೆ. ಗ್ರಾಹಕರು ಪ್ರೋತ್ಸಾಹ ನೀಡಿದರೆ ಮತ್ತಷ್ಟು ಶಾಖೆಗಳನ್ನು ತೆರೆಯಲು ಸಾಧ್ಯವಾಗಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯ ಬಶೀರ್ ಅಹ್ಮದ್, ಬಜ್ಪೆ ಜಕ್ರಿ ಬ್ಯಾರಿ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಬಿ. ಮುಹಮ್ಮದ್, ಗುತ್ತಿಗೆದಾರ ಶೇಖರ ಅಮೀನ್, ಅರುಣ್ ಚೌಟ ಬಾಲದ ಗುತ್ತು, ವಿಜಯ ವಿಠಲ ಭಜನಾ ಮಂಡಳಿಯ ಅಧ್ಯಕ್ಷ ಮೋಹನ ಐ. ಮೂಲ್ಯ, ಮಾಜಿ ತಾಪಂ ಸದಸ್ಯಟಿ.ಎ.ಖಾದರ್, ಶೇಖುಂಞಿ ಭಾಗವಹಿಸಿದ್ದರು.
ಸೊಸೈಟಿಯ ನಿರ್ದೇಶಕರಾದ ಹಾಜಿ ಅಬ್ದುಲ್ ಸಲಾಂ, ಅಬ್ದುಲ್ ರಝಾಕ್ ಎಂ., ಮುನೀರ್ ಅಹ್ಮದ್, ನಿಸಾರ್ ಫಕೀರ್ ಮುಹಮ್ಮದ್, ನವಾಝ್ ಅಬ್ಬಾಸ್, ಎನ್.ಪಿ. ಪುಷ್ಪರಾಜನ್, ಶಾಹಿದಾ ಉಪಸ್ಥಿತರಿದ್ದರು.

ಸೊಸೈಟಿಯ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಎಂ. ಸ್ವಾಗತಿಸಿದರು. ಕಾರ್ಯದರ್ಶಿ ಶೆರಿನ್ ಬಾನು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News