×
Ad

ಬೈಕಂಪಾಡಿ ಕೈಗಾರಿಕಾ ಪ್ರದೇಶ: ವಾಹನ ಸಂಚಾರ ಮಾರ್ಪಾಡು

Update: 2017-12-15 22:47 IST

ಮಂಗಳೂರು, ಡಿ.15: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಮುಖ್ಯ ರಸ್ತೆಗಳ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಆದೇಶ ಹೊರಡಿಸಿದ್ದಾರೆ.

ಬೈಕಂಪಾಡಿ ರಾ.ಹೆ.ಯಿಂದ ಜೋಕಟ್ಟೆ ಕ್ರಾಸ್ ರಸ್ತೆಯಲ್ಲಿ ಬಿಎಸ್ಸೆಎನ್ನೆಎಲ್ ಕಚೇರಿ-ಕೆಐಎಡಿಬಿ- ಅಡ್ಕ-ಪೊಲೀಸ್ ಠಾಣೆ- ದೀಪಕ್ ಪೆಟ್ರೋಲ್ ಬಂಕ್ ರಸ್ತೆಯಲ್ಲಿ ಒನ್ ವೇ ಮಾರ್ಗವಾಗಿ ವಾಹನಗಳು ಸಂಚರಿಸಬೇಕು. ದೀಪಕ್ ಪಂಪ್ ಎದುರು ರಸ್ತೆಯಿಂದ ಅಡ್ಕ-ಕೆಐಎಡಿಬಿ ಕಚೇರಿ, ಬಿಎಸ್ಸೆಎನ್ನೆಎಲ್ ಮಾರ್ಗವಾಗಿ ರಾ.ಹೆ. ಎಲ್ಲ ತರಹದ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ರಾ.ಹೆ. ಜೋಕಟ್ಟೆ ಕ್ರಾಸ್‌ನಿಂದ ದೀಪಕ್ ಪಂಪ್‌ವರೆಗೆ ಸರ್ವೀಸ್ ರಸ್ತೆಯಲ್ಲಿ ಎಲ್ಲ ವಾಹನಗಳ ಪಾರ್ಕಿಂಗ್ ನಿಲುಗಡೆಯನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News