ದ.ಕ. ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಮನವಿ
Update: 2017-12-15 22:53 IST
ಮಂಗಳೂರು, ಡಿ.15: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭುಗಿಲೆದ್ದಿರುವ ಮತೀಯ ಉದ್ವಿಗ್ನತೆಯ ಹಿನ್ನ್ನೆಲೆಯಲ್ಲಿ ದ.ಕ.ಜಿಲ್ಲಾದ್ಯಂತ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಯೋಗವು ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಮತ್ತು ದ.ಕ. ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಅಧ್ಯಕ್ಷ ಕೆ.ಅಶ್ರಫ್, ಸದಸ್ಯರಾದ ಹಮೀದ್ ಕುದ್ರೋಳಿ, ಮುಹಮ್ಮದ್ ಹನೀಫ್ ಯು, ಶರೀಫ್ ಚೊಕ್ಕಬೆಟ್ಟು, ಹಿದಾಯತ್ ಬಿ.ಕೆ., ಟಿ. ಮೊಯ್ದಿನ್, ಕಬೀರ್ ಕೃಷ್ಣಾಪುರ ಮತ್ತಿತ್ತರು ಉಪಸ್ಥಿತರಿದ್ದರು.