ಕ್ರಿಸ್ಮಸ್ ಆಚರಣೆ ರದ್ದು ಪಡಿಸಿದ ನಝರೆತ್

Update: 2017-12-15 17:59 GMT

ಜೆರುಸಲೇಂ, ಡಿ. 15: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡಿರುವುದನ್ನು ಪ್ರತಿಭಟಿಸಿ ಇಸ್ರೇಲ್‌ನ ಅರಬ್ ನಗರ ನಝರೆತ್ ಕೆಲವು ಕ್ರಿಸ್ಮಸ್ ಆಚರಣೆಗಳನ್ನು ರದ್ದುಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಯೇಸು ಕ್ರಿಸ್ತ ನಝರೆತ್ ನಲ್ಲಿ ಬೆಳೆದರು ಎಂದು ನಂಬಲಾಗಿದೆ.

ಸುಮಾರು 76,000 ಮುಸ್ಲಿಮ್ ಮತ್ತು ಕ್ರೈಸ್ತ ಜನಸಂಖ್ಯೆಯುಳ್ಳ ಇಸ್ರೇಲ್‌ನಲ್ಲಿರುವ ಅತೀ ದೊಡ್ಡ ಅರಬ್ ಪಟ್ಟಣ ನಝರೆತ್, ಕ್ರಿಸ್ಮಸ್ ಆಚರಣೆಗಳ ಕೇಂದ್ರ ಬಿಂದುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News