ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಎಚ್ಚರದಿಂದಿರಬೇಕು: ಡಾ.ಪ್ರಕಾಶ್ ಪಿ.ಎಸ್

Update: 2017-12-16 11:51 GMT

ಉಳ್ಳಾಲ, ಡಿ. 16: ನಿಟ್ಟೆ ಸಿಮ್ಯುಲೇಶನ್ ಸೆಂಟರ್‌ನಲ್ಲಿ ಅಪಘಾತ ಗಾಯಾಳುವಿನ ನಿರ್ವಹಣೆಯಲ್ಲಿ ತರಬೇತಿ ಇಂಟರ್ ನ್ಯಾಷನಲ್ ಟ್ರಾಮಾ ಲೈಫ್ ಸಪೋರ್ಟ್ ಕೋರ್ಸ್ ಉದ್ಘಾಟನೆ ಕಾರ್ಯಕ್ರಮವು ನಡೆಯಿತು.

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಡೀನ್ ಡಾ. ಪ್ರಕಾಶ್ ಪಿ.ಎಸ್. ಅವರು, ಅಪಘಾತದಿಂದ ಗಾಯಗೊಂಡ ಗಾಯಾಳುವನ್ನು ಘಟನೆಯ ಸ್ಥಳದಿಂದ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕೊಂಡೊಯ್ಯುವಾಗ ಪ್ರಮುಖವಾಗಿ ಜಾಗರೂಕರಾಗಬೇಕಿದೆ. ಸಾರಿಗೆ ಸಂಪರ್ಕಗಳು ಸರಿಯಾಗದಿದ್ದರೆ ಮತ್ತೆ ಹೊಸ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇಮದ ಕುಲಸಚಿವ ಡಾ.ಜಯಪ್ರಕಾಶ್ ಶೆಟ್ಟಿ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಹಿರೇಮಠ್, ನಿಟ್ಟೆ ಸಿಮ್ಯುಲೇಶನ್ ಕೇಂದ್ರದ ಸಂಯೋಜಕ ಡಾ.ರವೀಂದ್ರ ಯು.ಎಸ್ ಮೊದಲಾದವರು ಉಪಸ್ಥಿತರಿದ್ದರು.
 
ಎಲುಬು ಮತ್ತು ಕೀಲು ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಸಿದ್ದಾರ್ಥ ಶೆಟ್ಟಿ ಸ್ವಾಗತಿಸಿದರು. ಡಾ.ರಾಜಶೇಖರ ಮೋಹನ್ ವಂದಿಸಿದರು. ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕ ಡಾ.ಶ್ರೀಪಾದ ಜಿ.ಮೆಹಂದಳೆ ಕಾರ್ಯಕ್ರಮ ನಿರೂಪಿಸಿದರು. ಮೂವೈತ್ತಕ್ಕೂ ಮಿಕ್ಕಿ ವಿವಿಧ ಸಂಸ್ಥೆಗಳ ವೈದ್ಯರು ಹಗೂ ಅರೆವೈದ್ಯಕೀಯ ಸಿಬ್ಬಂದಿ ತರಬೇತಿ ಪಡೆದು ಅಮೇರಿಕಾ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News