ಸಂಶೋಧನೆ ಆಸಕ್ತರಿಗಷ್ಟೆ ಮೀಸಲು: ಡಾ.ತಿರುಮಲೇಶ್ವರ ಭಟ್

Update: 2017-12-16 12:44 GMT

ಉಡುಪಿ, ಡಿ.16: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಎಸ್‌ಟಿಇ ಬೋಧಕ ಘಟಕದ ಆಶ್ರಯದಲ್ಲಿ ‘ಸಂಶೋಧನೆ: ಏಕೆ, ಏನು ಮತ್ತು ಹೇಗೆ?’ ಎಂಬ ವಿಷಯದ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಉಪನ್ಯಾಸ ನೀಡಿ, ಸಂಶೋಧನೆ ಆಸಕ್ತರಿಗಷ್ಟೆ ಮೀಸಲು. ಕಠಿಣ ಪರಿಶ್ರಮ, ಸಂಪೂರ್ಣ ತೊಡಗಿಸಿಕೊಳ್ಳುವಿಕೆ, ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಸಂಶೋಧನೆಗೆ ಇದೆ ಎಂದು ಹೇಳಿದರು.

ಸುರತ್ಕಲ್ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಡಾ.ಮೋಹಿತ್ ತಾಹಿಲಿಯಾನಿ ಸಂಶೋಧನೆ ಮತ್ತು ಪಿಎಚ್‌ಡಿಗೆ ಇರುವ ಮೂಲಭೂತ ವ್ಯತ್ಯಾಸಗಳು, ನಿಯಮಿತವಾದ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಸಂಶೋಧನೆಯನ್ನು ಭಾಗವಾಗಿಸುವ ವಿಧಾನಗಳ ಕುರಿತು ವಿವರಿಸಿದರು.

ಎರಡು ದಿನಗಳ ಗೋಷ್ಠಿಯಲ್ಲಿ ಸಂಸ್ಥೆಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಕೆ.ಶ್ರೀನಿವಾಸನ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಎಚ್.ಜೆ., ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲೊಲಿಟಾ ಪ್ರಿಯ ಕ್ಯಾಸ್ತಲಿನೊ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರೀನಾ, ಬೆಂಗಳೂರಿನ ಕೆ.ಎಸ್.ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎನ್. ಶ್ರೀಧರ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News