×
Ad

ಟುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ

Update: 2017-12-16 21:16 IST

ಐಜ್ವಾಲ್, ಡಿ. 16: ಸಿಕ್ಕಿಂ ಹಾಗೂ ತ್ರಿಪುರಾದ ಬಳಿಕ ಈಶಾನ್ಯದಲ್ಲಿ ವಿದ್ಯುತ್ ಮಿಗುತಾಯ ಹೊಂದಿರುವ ಮೂರನೇ ರಾಜ್ಯ ಮಿರೆರಾಂ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಕೇಂದ್ರ ಸರಕಾರದ ಯೋಜನೆಗಳಿಂದ ಈಶಾನ್ಯ ರಾಜ್ಯಗಳು ಲಾಭ ಪಡೆದುಕೊಂಡಿವೆ. ಅಲ್ಲದೆ, ಈ ವಲಯದ ಅಭಿವೃದ್ಧಿಗೆ ತನ್ನ ಸರಕಾರ ಬದ್ಧವಾಗಿತ್ತು ಎಂದು ಅವರು ಹೇಳಿದರು. ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಧಾನಿ, 60 ಮೆಗಾವ್ಯಾಟ್‌ನ ಟುಯಿರಿಯಲ್ ಜಲವಿದ್ಯುತ್ ಯೋಜನೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಮೂಲಕ ಮಿರೆರಾಂನ ಚರಿತ್ರೆಯಲ್ಲಿ ಹಾಕಿರುವ ಪ್ರಮುಖ ಮೈಲುಗಲ್ಲನ್ನು ನಾವು ಸಂಭ್ರಮಿಸುತ್ತಿದ್ದೇವೆ ಎಂದರು.

ಈ ಜಲ ವಿದ್ಯುತ್ ಯೋಜನೆ ಪ್ರತೀ ವರ್ಷ 251 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುತ್ತದೆ ಹಾಗೂ ರಾಜ್ಯದಲ್ಲಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News