ಅಕ್ರಮ ಮರಳುಗಾರಿಕೆ: ಟಿಪ್ಪರ್, ಮರಳು ವಶ
Update: 2017-12-16 22:06 IST
ಬ್ರಹ್ಮಾವರ, ಡಿ.16: ಕುಮ್ರಗೋಡು ಗ್ರಾಮದ ಮಾಬುಕಳ ಸಿದ್ದಿವಿನಾಯಕ ದೇವಸ್ಥಾನದ ಸಮೀಪ ಅನಧಿಕೃತ ವಾಗಿ ಮರಳುಗಾರಿಕೆಗೆ ಬಳಸಿದ ದೋಣಿ, ಟಿಪ್ಪರ್ ಹಾಗೂ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಕುಮ್ರಗೋಡುವಿನ ಸತ್ಯರಾಜ್ ಎಂಬವರಿಗೆ ಅಧಿಕೃತವಾಗಿ ಜಿಪಿಎಸ್ ದಾಖಲಿಸಿ ಅನುಮತಿಸಲಾದ ಮರಳು ಧಕ್ಕೆಗೆ ಮಂಗಳೂರು ಚಾಲಿತ ದಳದ ಹಿರಿಯ ಭೂವಿಜ್ಞಾನಿ ನಿರಂಜನ್ ಮತ್ತು ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯ ಭೂವಿಜ್ಞಾನಿ ಎಚ್.ಎಸ್.ಮಹಾದೇಶ್ವರ ದಾಳಿ ನಡೆಸಿದ್ದರು. ಅಲ್ಲಿ ಪರಿಶೀಲಿಸಿದಾಗ ಜಿಪಿಎಸ್ ಅಳವಡಿಸದ ಅನಧಿಕೃತವಾಗಿ ಮರಳುಗಾರಿಕೆಗೆ ಬಳಸಿದ ಒಂದು ದೋಣಿ, ಜಿಪಿಎಸ್ ಅಳವಡಿಸದ ಟಪ್ಪರ್ ಲಾರಿ ಮತ್ತು ಅದರಲ್ಲಿದ್ದ 3 ಸಾವಿರ ರೂ. ಮೌಲ್ಯದ 8 ಮೇಟ್ರಿಕ್ ಟನ್ ತೂಕದ ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.