ಬೈಕ್ ಅಪಘಾತ: ಗಾಯಾಳು ಮೃತ್ಯು
Update: 2017-12-16 22:07 IST
ಕುಂದಾಪುರ, ಡಿ.16: ಕೆಂಚನೂರು ಗ್ರಾಮದ ಶೆಟ್ರಕಟ್ಟೆಯ ಕದ್ರಿಗುಡ್ಡೆ ಎಂಬಲ್ಲಿ ಡಿ.14ರಂದು ಸಂಜೆ ವೇಳೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಾಯ ಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.
ಮೃತರನ್ನು ಸಂದೀಪ ಭಂಡಾರಿ ಎಂದು ಗುರುತಿಸಲಾಗಿದೆ. ಇವರು ಬೈಕ್ ಸವಾರ ಪ್ರಸನ್ನ ಭಂಡಾರಿ ಜೊತೆ ಹೋಗುತ್ತಿದ್ದ ನಾಯಿಯೊಂದು ರಸ್ತೆಗೆ ಅಡ್ಡ ಬಂತ್ತೆನ್ನಲಾಗಿದೆ. ಇದನ್ನು ಕಂಡ ಪ್ರಸನ್ನ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡ ಸಂದೀಪ್ ಭಂಡಾರಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.