ವೇತನ ಕೇಳಿದಕ್ಕೆ ಜಾತಿ ನಿಂದನೆ: ದೂರು
Update: 2017-12-16 22:14 IST
ಮಂಗಳೂರು, ಡಿ. 16: ತಾನು ಕೆಲಸ ಮಾಡಿದ್ದ ವೇತನವನ್ನು ಕೇಳಲು ಹೋದಾಗ ಸಂಸ್ಥೆಯ ಮಾಲಕನ ಪ್ರೇರಣೆಯಿಂದ ಇಬ್ಬರು ಹಿಯಾಳಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ರಾಜೇಶ್ ಎಂಬವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಟ್ಟಾರಚೌಕಿಯ ರೋಡ್ರಿಗಸ್ ಅವರ ಪ್ರೇರಣೆಯಿಂದ ಎಚ್.ಆರ್. ವಿಭಾಗದ ಪ್ರೀತಮ್ ಹಾಗೂ ಎಕೌಂಟೆಂಟ್ ರಾಜ್ ಕುಮಾರ್ ಅವರು ಜಾತಿ ನಿಂದನೆ ಮಾಡಿದ್ಧಾರೆ ಎಂದು ರಾಜೇಶ್ ಆರೋಪಿಸಿದ್ದಾರೆ.
ರಾಜೇಶ್ ಅವರು 2017ರ ಮಾರ್ಚ್ ತಿಂಗಳಿನಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ಪ್ರೀತಮ್ ಹಾಗೂ ರಾಜ್‌ಕುಮಾರ್ ಹಸ್ತಕ್ಷೇಪ ಮಾಡುತ್ತಲೇ ಇದ್ದರು. ಇದರಿಂದ ಬೇಸತ್ತು ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಎರಡು ತಿಂಗಳ ಸಂಬಳ ಮಾತ್ರ ಪಾವತಿಯಾಗಿರಲಿಲ್ಲ. ಇದನ್ನು ಕೇಳಲು ಹೋದಾಗ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.