×
Ad

​ವಿಕಲಚೇತನರ ಹೊಸ ಪಾಸುಗಳ ವಿತರಣೆ

Update: 2017-12-16 22:30 IST

ಮಂಗಳೂರು, ಡಿ.16: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ 2017ನೆ ಸಾಲಿನಲ್ಲಿ ವಿಕಲಚೇತನರ ರಿಯಾಯತಿ ದರದ ಬಸ್ ಪಾಸುಗಳನ್ನು ವಿತರಣೆ/ನವೀಕರಣ ಮಾಡಬೇಕಾಗಿದೆ.

ವಿಕಲಚೇತನರ ಫಲಾನುಭವಿಗಳಿಗೆ ನವೀಕರಿಸಿಕೊಳ್ಳಲು ಆಗಬಹುದಾದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಹಾಲಿ 2017ನೆ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್ ಪಾಸುಗಳನ್ನು 2018ನೆ ಫೆಬ್ರವರಿ 28 ರವರೆಗೆ ಅನುಮತಿಸಲಾಗುವುದು.

ಜ.1ರಿಂದ ವಿಕಲಚೇತನರ ಪಾಸುಗಳ ವಿತರಣೆ/ನವೀಕರಣವನ್ನು ಪ್ರಾರಂಭಿಸಲಾಗುವುದು. ಈ ಸಂಬಂಧ ಫಲಾನುಭವಿಗಳು ರೂ. 660 ನಗದು ರೂಪದಲ್ಲಿ ಪಾವತಿಸಿ 2018ನೆ ಸಾಲಿಗೆ ಪಾಸನ್ನು ಪಡೆಯಬಹುದಾಗಿದೆ.

ಎಲ್ಲಾ ಫಲಾನುಭವಿಗಳು ಫೆ. 28ರೊಳಗೆ ವಿಕಲಚೇತನರ ರಿಯಾಯತಿ ಬಸ್ ಪಾಸನ್ನು ಪಡೆದುಕೊಳ್ಳಬಹುದು. ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ಪಾಸುದಾರರ ನವೀಕರಣ ಸಮಯದಲ್ಲಿಯೂ ಸಹ ಗುರುತಿನ ಚೀಟಿಯ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿತರಿಸುವ ಗುರುತಿನ ಚೀಟಿಯ ಧೃಡೀಕರಣ ಪತ್ರದ ಮೂಲ ಪ್ರತಿಯನ್ನು ಪರಿಶೀಲನೆಗಾಗಿ ತೋರಿಸಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ, ಕ.ರಾ.ರ.ಸಾ.ನಿಗಮ, ಪುತ್ತೂರು ವಿಭಾಗ ಇವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News