ಡಿ. 17ರಂದು ಗ್ರಾ.ಪಂ. ಉಪಚುನಾವಣೆ: ನಿಷೇಧಾಜ್ಞೆ
ಮಂಗಳೂರು, ಡಿ.16: ದ.ಕ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯು ಡಿ. 17ರಂದು ನಡೆಯಲಿದೆ.
ಮಂಗಳೂರು ತಾಲೂಕಿನ ಮಲೂರು ಮತ್ತು ಪಾವೂರು ಗ್ರಾ.ಪ. ಬಂಟ್ವಾಳ ತಾಲೂಕಿನ ಮಂಚಿ ಗ್ರಾ.ಪ. ಹಾಗೂ ಪುತ್ತೂರು ತಾಲೂಕಿನ ಕೊಲ ಗ್ರಾಮ ಪಂಚಾಯತ್‌ಗಳಲ್ಲಿ ಚುನಾವಣೆ ನಡೆಯಲಿವೆ.
ಈ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ ಮತ್ತು ಶಾಂತಿಯುತ ವಾತಾವರಣದಲ್ಲಿ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿರು ವುದರಿಂದ ದ.ಕ. ಜಿಲ್ಲೆಯಲ್ಲಿ ಡಿ. 16ರ ಬೆಳಗ್ಗೆಯಿಂದ ಡಿ.17ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಮದ್ಯದಂಗಡಿಗಳನ್ನು ಮುಚ್ಚಲು ದ.ಕ. ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ಮತ ಎಣಿಕೆಯು ಡಿ. 20 ರಂದು ನಡೆಯಲಿದ್ದು ಅಂದು ಕೂಡ ಬೆ ಳಗ್ಗೆ 6 ರಿಂದ ರಾತ್ರಿ 8 ಗಂಟೆಯ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿದೆ. ಅಗತ್ಯವಿದ್ದಲ್ಲಿ ಮರು ಚುನಾವಣೆಯು ಡಿ.19 ರಂದು ನಡೆಯಲಿರುವುದು ಎಂದು ಜಿಲ್ಲಾಧಿಕಾರಿಯವರ ಪ್ರಕಟನೆ ತಿಳಿಸಿದೆ.