ಮೂರನೇ ಏಕದಿನ ಪಂದ್ಯ : ಭಾರತದ ಗೆಲುವಿಗೆ 216 ರನ್‌ಗಳ ಸವಾಲು

Update: 2017-12-17 12:05 GMT
ಎರಡನೇ ವಿಕೆಟ್‌ಗೆ  121 ರನ್‌ಗಳ ಜೊತೆಯಾಟ  ನೀಡಿದ  ತರಂಗಾ ಮತ್ತು ಸಮರವಿಕ್ರಮ. 

ವಿಶಾಖಪಟ್ಟಣ, ಡಿ.17: ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ 44.5 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲೌಟಾಗಿದೆ.

ಟಾಸ್ ಜಯಿಸಿದ ಟೀಮ್ ಇಂಡಿಯಾದ ಹಂಗಾಮಿ ನಾಯಕ ರೋಹಿತ್ ಶರ್ಮಾ ಅವರು ಶ್ರೀಲಂಕಾವನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು.

ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿದ ಶ್ರೀಲಂಕಾದ ದಾಂಡಿಗರು ಬೇಗನೆ ಇನಿಂಗ್ಸ್ ಮುಗಿಸಿದ್ದಾರೆ.

ಆರಂಭಿಕ ದಾಂಡಿಗ ಉಪುಲ್ ತರಂಗಾ 95 ರನ್(82, 12ಬೌ,3ಸಿ) ಮತ್ತು ಸದೀರ ಸಮರವಿಕ್ರಮ 42 ರನ್(57ಎ, 5ಬೌ) ಇವರ ನೆರವಿನಲ್ಲಿ ಲಂಕಾ ಸ್ಪರ್ಧಾತ್ಮಕ ಸ್ಕೋರ್ ದಾಖಲಿಸಿದೆ.

   3.4 ಓವರ್‌ಗಳಲ್ಲಿ 15ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡಕ್ಕೆ ಎರಡನೇ ವಿಕೆಟ್‌ಗೆ ತರಂಗಾ ಮತ್ತು ಸಮರವಿಕ್ರಮ ಜೊತೆಯಾಗಿ 121 ರನ್‌ಗಳ ಕಾಣಿಕೆ ನೀಡಿದ್ದರು. ಸಮರವಿಕ್ರಮ ಮತ್ತು ತರಂಗಾ ಔಟಾದ ಬಳಿಕ ಲಂಕಾದ ಬ್ಯಾಟಿಂಗ್ ಸೊರಗಿತು. ಧನುಷ್ಕ ಗುಣತಿಲಕ (13), ಆ್ಯಂಜೆಲೊ ಮ್ಯಾಥ್ಯೂಸ್(17), ಅಸೆಲಾ ಗುಣರತ್ನೆ (17) ಎರಡಂಕೆಯ ಸ್ಕೊರ್ ದಾಖಲಿಸಿದರು.

ಭಾರತದ ಕುಲ್‌ದೀಪ್ ಯಾದವ್ ಮತ್ತು ಯುಜುವೇಂದ್ರ ಚಹಾಲ್ ತಲಾ 3ವಿಕೆಟ್, ಹಾರ್ದಿಕ್ ಪಾಂಡ್ಯ 2 ವಿಕೆಟ್, ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ ಕುಮಾರ್ ತಲಾ 1 ವಿಕೆಟ್ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News