×
Ad

ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರದ ಮತ್ತೋರ್ವ ಯುವಕ ಮರಳಿ ಮನೆಗೆ

Update: 2017-12-17 20:40 IST

ಶ್ರೀನಗರ, ಡಿ. 17: ಭಯೋತ್ಪಾದಕ ಸಂಘಟನೆಗೆ ಸೇರಿದ ಯುವಕನೋರ್ವ ಹಿಂಸಾಚಾರದ ಹಾದಿಯಿಂದ ಬೇಸತ್ತು ದಕ್ಷಿಣ ಕಾಶ್ಮೀರದಲ್ಲಿರುವ ತನ್ನ ಮನೆಗೆ ಹಿಂದಿರುಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದನೆ ದಾರಿ ಹಿಡಿದ ಯುವಕರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಜಮ್ಮು ಕಾಶ್ಮೀರ ಪೊಲೀಸರ ಪ್ರಯತ್ನಕ್ಕೆ ಇದರಿಂದ ಬಲ ಬಂದಂತಾಗಿದೆ. ಭಯೋತ್ಪಾದಕ ಸಂಘಟನೆ ಸೇರಿದ್ದ ಇನ್ನೋರ್ವ ಯುವಕ ಹಿಂಸೆಯ ಹಾದಿಯಿಂದ ಬೇಸತ್ತು ಮತ್ತೆ ತನ್ನ ಮನೆಗೆ ಹಿಂದಿರುಗಿದ್ದಾನೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಯುವಕನ ವಿವರ ನೀಡಲು ನಿರಾಕರಿಸಿರುವ ಅವರು, ಯುವಕನ ಸುರಕ್ಷತೆ ನಮಗೆ ತುಂಬಾ ಮುಖ್ಯ ಎಂದಿದ್ದಾರೆ.

“ನಾವು ಇಂತಹ ನಿಲುವನ್ನು ಸ್ವಾಗತಿಸುತ್ತೇವೆ. ಯುವಕನನ್ನು ಮತ್ತೆ ಮುಖ್ಯವಾಹಿನಿಗೆ ಸೇರಿಸಲು ಕುಟುಂಬದವರು ನಡೆಸಿದ ಪ್ರಯತ್ನವನ್ನು ನಾವು ಪ್ರಶಂಸಿಸುತ್ತೇವೆ. ಯುವಕನ ಭದ್ರತೆಗೆ ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆತನಿಗೆ ಶುಭ ಹಾರೈಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಸಂಘಟನೆಗೆ ಸೇರಿ ಅಲ್ಲಿನ ಹಿಂಸಾ ದಾರಿಗೆ ಬೇಸತ್ತು ಯುವಕ ಹಿಂದಿರುಗಿದ ಮೂರನೇ ಘಟನೆ ಇದಾಗಿದೆ. ಕಳೆದ ತಿಂಗಳು ಫುಟ್‌ಬಾಲ್ ಆಟಗಾರ ಮಜೀದ್ ಖಾನ್ ತಾಯಿಯ ಮನವಿಗೆ ಓಗೊಟ್ಟು ಶಸ್ತ್ರಾಸ್ತ್ರ ಕೆಳಗಿರಿಸಿ ಮನೆಗೆ ಹಿಂದಿರುಗಿದ್ದ. ಅದಾದ ಕೆಲವು ದಿನಗಳ ಬಳಿಕ ಇನ್ನೋರ್ವ ತನ್ನ ಕುಟುಂಬದ ಮನವಿ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆ ತ್ಯಜಿಸಿ ಮನೆಗೆ ಮರಳಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News