ಸಾಕರ್ ಉಳ್ಳಾಲ ತಂಡಕ್ಕೆ ಅಝರಿಯಾ ಕಪ್
Update: 2017-12-17 21:08 IST
ಮಂಗಳೂರು, ಡಿ.17: ಅಝರಿಯಾ ಪುಟ್ಬಾಲ್ ಕ್ಲಬ್‌ನ ಆಶ್ರಯದಲ್ಲಿ ದಿ.ಪುಂಡಲಿಕ ಕರ್ಕೇರ ಸ್ಮರಣಾರ್ಥ 9ಎ ಸೈಡ್ ಪುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸಾಕರ್ ಉಳ್ಳಾಲ ತಂಡವು ಜೆಮ್ ಪುಟ್ಬಾಲ್ ಕ್ಲಬ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಅಝರಿಯಾ ಕಪ್ ಪಡೆದುಕೊಂಡಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪಿಯೂಸ್ ಕಲ್ಲಾಪು, ದಿ. ಪುಂಡಲೀಕ ಕರ್ಕೇರ ಅವರ ಪುತ್ರ ಮೋಹನ್ ಬೆಂಗ್ರೆ, ದ.ಕ. ಜಿಲ್ಲಾ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಅಸ್ಲ್ಲಂ, ಉದ್ಯಮಿ ಶಾಜಿದ್ ಎ.ಕೆ., ಅಝರಿಯಾ ಪುಟ್ಬಾಲ್ ಕ್ಲಬ್‌ನ ಮುಖ್ಯಸ್ಥ ಅಬ್ದುಸ್ಸಲಾಂ, ಹಿರಿಯ ಆಟಗಾರ ಮೊಯ್ದಿನ್ ಉಸ್ಮಾನ್ ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಪುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಹುಸೇನ್ ಬೋಳಾರ್, ರಾಜ್ಯ ಪುಟ್ಬಾಲ್ ಸಂಸ್ಥೆಯ ವಿಜಯ್ ಸುವರ್ಣ, ಹಿರಿಯ ಆಟಗಾರರಾದ ಹರಿಶ್ಚಂದ್ರ ಬೆಂಗ್ರೆ, ಕಾಸಿಂ ಅವರನ್ನು ಸನ್ಮಾನಿಸಲಾಯಿತು. ಕಾರ್ಪೊರೇಟರ್ ಲತೀಫ್ ಕಂದಕ್ ಸ್ವಾಗತಿಸಿದರು.