ಇವಿಎಂ ಹ್ಯಾಕ್ ಮಾಡಲು 140 ಇಂಜಿನಿಯರ್ ಗಳ ನೇಮಕ: ಹಾರ್ದಿಕ್ ಪಟೇಲ್ ಆರೋಪ

Update: 2017-12-17 15:48 GMT

ಹೊಸದಿಲ್ಲಿ, ಡಿ.17: ಇವಿಎಂಗಳನ್ನು ತಿರುಚುವುದಕ್ಕಾಗಿ ಸಾಫ್ಟ್ ವೇರ್ ಇಂಜಿನಿಯರ್ ಗಳ ತಂಡವನ್ನು ನೇಮಕ ಮಾಡಲಾಗಿದೆ ಎಂದು ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.

ಅಹ್ಮದಾಬಾದ್ ಮೂಲಕ ಕಂಪೆನಿಯೊಂದರ 140 ಇಂಜಿನಿಯರ್ ಗಳ ಸಹಾಯದಿಂದ ಗುಜರಾತ್ ನ 5000 ಇವಿಎಂಗಳನ್ನು ಹ್ಯಾಕ್ ಮಾಡಲು ಸಿದ್ಧತೆಗಳು ನಡೆಯುತ್ತಿದೆ ಎಂದು ಹಾರ್ದಿಕ್ ಪಟೇಲ್ ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.

ವಿಸ್ನಗರ್, ರಾಧಾನ್ಪುರ ಸೇರಿದಂತೆ ಪಟೇಲ್ ಸಮುದಾಯದ ಜನರು ಹೆಚ್ಚಾಗಿರುವ ಕಡೆಗಳಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡುವ ಪ್ರಯತ್ನ ನಡೆದಿರುವುದಾಗಿ ಅವರು ಮತ್ತೊಂದು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಹಾರ್ದಿಕ್ ಇವಿಎಂ ಟ್ಯಾಂಪರಿಂಗ್ ಬಗ್ಗೆ ಆರೋಪಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News