ನ್ಯಾಯಾಂಗ, ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ: ಜೇಟ್ಲಿ ಕರೆ

Update: 2017-12-17 16:12 GMT

ಪುಣೆ, ಡಿ. 17: ದೇಶದ ನ್ಯಾಯಾಂಗ ಹಾಗೂ ಶಿಕ್ಷಣದಲ್ಲಿ ಆಮೂಲಾಗ್ರ ಸುಧಾರಣೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರವಿವಾರ ಕರೆ ನೀಡಿದ್ದಾರೆ. ಯುವಜನಾಂಗಕ್ಕೆ ಸಾಕಷ್ಟು ತರಬೇತಿ ನೀಡಬೇಕಿದೆ. ಆಗ ಮಾತ್ರ ಅವರು ಬದುಕಿನ ಎಲ್ಲ ಹಂತಗಳಲ್ಲಿ ನಾಯಕರಾಗಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಇಲ್ಲಿನ ಸಿಂಬೋಸಿಸ್ (ಸ್ವಾಯತ್ತ ವಿಶ್ವವಿದ್ಯಾನಿಲಯ)ನ 14ನೇ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಅಗತ್ಯತೆ ಇದೆ ಎಂದರು. ಯಾವ ರೀತಿಯ ಸುಧಾರಣೆ ಅಗತ್ಯವಿದೆ ಎಂಬುದನ್ನು ವಿಸ್ತರಿಸದ ಅವರು, ದೇಶದಲ್ಲಿ ಮಿಲಿಯಗಟ್ಟಲೆ ಯುವಜನಾಂಗಕ್ಕೆ ಉತ್ತಮ ತರಬೇತಿ ನೀಡಬೇಕಿದೆ. ಆಗ ಮಾತ್ರ ಅವರು ಬದುಕಿನ ಎಲ್ಲ ಹಂತಗಳಲ್ಲಿ ನಾಯಕರಾಗಲು ಸಾಧ್ಯ ಎಂದರು. ಜನಸಂಖ್ಯೆ ಹೆಚ್ಚಳದಿಂದ ಪ್ರಗತಿ ಕುಂಠಿತವಾಗುತ್ತಿದೆ.

ದೇಶದ ಈ ಬಿಕ್ಕಟ್ಟಿಗೆ ಪರಿಹಾರ ಒದಗಿಸಲು ಸ್ನಾತಕೋತ್ತರ ವಿದ್ಯಾರ್ಥಿಗಳು ಸಿದ್ಧಗೊಳ್ಳಬೇಕು ಹಾಗೂ ಸ್ವಯಂ ತರಬೇತುಗೊಳ್ಳಬೇಕು ಎಂದು ಅವರು ಹೇಳಿದರು. ಇದು ಜನಸಂಖ್ಯೆ ಬಳಸಿಕೊಳ್ಳುವ ಉತ್ತಮ ದಾರಿ ಎಂದು ಹೇಳಿದ ಅವರು, ಸರಕಾರ ಮಾತ್ರವೇ ಸಾಕಷ್ಟು ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News