ಕ್ಯಾಲಿಫೋರ್ನಿಯಾದಲ್ಲಿ: ಕಾಡ್ಗಿಚ್ಚು ಉಲ್ಬಣ

Update: 2017-12-17 16:58 GMT

ವಾಶಿಂಗ್ಟನ್,ಡಿ.17: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ದಕ್ಷಿಣ ಭಾಗದಲ್ಲಿ ಡಿಸೆಂಬರ್ 4ರಿಂದ ಭುಗಿಲೆದ್ದಿರುವ ಕಾಡ್ಗಿಚ್ಚು, ಕಳೆದ ಎರಡು ದಿನಗಳಿಂದ ಇನ್ನಷ್ಚು ತೀವ್ರ ರೂಪ ಪಡೆದಿದ್ದು, ಸಹಸ್ರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಉತ್ತರ ದಿಕ್ಕಿನಿಂದ ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಕಾಡ್ಗಿಚ್ಚು ದಕ್ಷಿಣ ಕ್ಯಾಲಿಫೋರ್ನಿಯಾದ ಇನ್ನಷ್ಟು ಭಾಗಗಳಿಗೆ ಹರಡಿದೆಯೆಂದು ಅವರು ತಿಳಿಸಿದ್ದಾರೆ.

    ‘ಥಾಮಸ್ ಫೈರ್’ ಎಂದು ಕರೆಯಲಾಗುವ ಈ ಕಾಡ್ಗಿಚ್ಚು 2.67 ಲಕ್ಷ ಎಕರೆ ಪ್ರದೇಶವನ್ನು ಸುಟ್ಟುಹಾಕಿದ್ದು, ಇತಿಹಾಸದಲ್ಲೇ ಮೂರನೆ ಅತಿ ಭೀಕರ ಕಾಡ್ಗಿಚ್ಚಾಗಿದೆ. ಆದಾಗ್ಯೂ ಶನಿವಾರ ಸಂಜೆಯವರೆಗೆ ಶೇ.40ರಷ್ಟು ಕಾಡ್ಗಿಚ್ಚನ್ನು ನಿ.ಯಂತ್ರಿಸಲಾಗಿದೆ. ಈಗ ಐಶಾರಾಮಿ ರೆಸಾರ್ಟ್‌ಗಳು ಹಾಗೂ ಖ್ಯಾತನಾಮರ ಬಂಗಲೆಗಳಿಂದ ಪ್ರಸಿದ್ಧವಾಗಿರುವ ಮೊಂಟೆಸಿಟೊದತ್ತ ಸಾಗುತ್ತಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News