ಕೋಟೇಶ್ವರ: ‘ಸೆಕ್ಟರ್ ಪ್ರತಿಭೋತ್ಸವ -2017’ ಸಮಾರೋಪ ಸಮಾರಂಭ
Update: 2017-12-17 22:54 IST
ಕೋಟ, ಡಿ. 17: ಎಸ್.ಎಸ್.ಎಫ್ ಕೋಟೇಶ್ವರ ಸೆಕ್ಟರ್ ಪ್ರತಿಭೋತ್ಸವ-೧೭ ಕೋಟ ಪಡುಕರೆಯಲ್ಲಿ ಇಂದು ನಡೆಯಿತು.
ಇದರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಸ್ಸಯ್ಯದ್ ಜಾಫರ್ ತಂಙಳ್ ವಹಿಸಿ, ದುಃಆ ಮತ್ತು ಆಶೀರ್ವಚನ ನೀಡಿದರು.
ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಎಸ್.ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ನೆರವೇರಿಸಿದರು.
ಕೋಡಿ ಕನ್ಯಾನ ಜುಮಾ ಮಸೀದಿಯ ಅಧ್ಯಕ್ಷ ಮೂಸಾಬ್ಯಾರಿ ಹಾಗೂ ಕೋಟ ಪಡುಕರೆ ಅಧ್ಯಕ್ಷ ಹಸೈನಾರ್ ಅವರು ಬಹುಮಾನ ವಿತರಣೆ ಮಾಡಿದರು.
ಕೋಡಿ ಕನ್ಯಾನ ಜುಮಾ ಮಸೀದಿ ಖತೀಬ್ ಜೆ.ಎಮ್.ಎ ಸಿದ್ದೀಖ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ದಲ್ಲಿ ಮೂಡುಗೋಪಾಡಿಯು ಚಾಂಪಿಯನ್ ಆಗಿ ಮೂಡಿಬಂದರೆ, ಕೋಟ ಪಡುಕರೆಯು ಎರಡನೆ ಸ್ಥಾನ ಪಡೆಯಿತು.