ಮಾರಾಟ ಕ್ಷೇತ್ರದ ಹುದ್ದೆಗೂ ಪದವಿಗೂ ಸಂಬಂಧವಿಲ್ಲ: ಸಮೀಕ್ಷಾ ವರದಿಯಲ್ಲಿ ಉಲ್ಲೇಖ

Update: 2017-12-17 17:32 GMT

  ಮುಂಬೈ, ಡಿ.17: ಎಂಬಿಎ ಪದವೀಧರರು ಮಾರಾಟ ಮತ್ತು ಮಾರುಕಟ್ಟೆ ವಿಷಯದಲ್ಲಿ ಪರಿಣತರಾಗಿರುತ್ತಾರೆ. ಆದರೆ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಪ್ರಥಮ ಶ್ರೇಣಿಯ ಎಂಬಿಎ ವಿವಿಗಳಲ್ಲಿ ಅಧ್ಯಯನ ನಡೆಸಿದ ಪದವೀಧರ ಮಾರಾಟ ಮುಖ್ಯಸ್ಥರ ಪ್ರಮಾಣ ಕೇವಲ ಶೇ.8ರಷ್ಟಾಗಿದೆ . ಬಹುತೇಕ ಸಂಸ್ಥೆಗಳಲ್ಲಿ ಪದವಿ ವಿದ್ಯಾರ್ಥಿಗಳು ಮಾರುಕಟ್ಟೆ ವಿಭಾಗದ ಉನ್ನತ ಹುದ್ದೆಯಲ್ಲಿರುತ್ತಾರೆ ಎಂದು ಸಮೀಕ್ಷೆಯೊಂದರ ವರದಿ ತಿಳಿಸಿದೆ.

 ಮಾರಾಟ ಕ್ಷೇತ್ರವನ್ನು ಪರಿಗಣಿಸಿದರೆ, ವಿವಿ ಪದವೀಧರರು ಅಧ್ಯಯನ ಮಾಡಿದ ವಿಷಯಕ್ಕೂ ಅವರು ತಮ್ಮ ವೃತ್ತಿಯಲ್ಲಿ ಮುಂದುವರಿಯುವ ವಿಷಯಕ್ಕೂ ಪರಸ್ಪರ ಸಂಬಂಧವೇ ಇರುವುದಿಲ್ಲ. ಅಲ್ಲದೆ ಶೇ.62ರಷ್ಟು ಮಾರಾಟ ವಿಭಾಗದ ಮುಖ್ಯಸ್ಥರು ಕೇವಲ ಪದವಿ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ ಎಂದು ‘ಬಿಲಾಂಗ್’ ಎಂಬ ಉದ್ಯೋಗ ನೇಮಕಾತಿ ಸಂಸ್ಥೆಯ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

  ಮಾರಾಟ ಕ್ಷೇತ್ರದಲ್ಲಿ ತಮ್ಮ ವೃತ್ತಿ ಆರಂಭಿಸಿದ ವಿವಿ ಪದವೀಧರರು ಕೆಲವೇ ವರ್ಷಗಳಲ್ಲಿ ವೃತ್ತಿ ಬದಲಿಸುತ್ತಾರೆ. ಆದರೆ ಉತ್ಪಾದನಾ ನಿರ್ವಹಣೆ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ಕ್ರಮವಾಗಿ ಶೇ.18 ಮತ್ತು ಶೇ.11ರಷ್ಟು ಉದ್ಯೋಗಿಗಳು ಎಂಬಿಎ ಪದವೀಧರರು. ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶ ಹೆಚ್ಚಿರುವ ಕಾರಣ ಮಾರಾಟ ಕುಶಲ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲೂ ಭಾರೀ ಸ್ಪರ್ಧೆಯ ಸ್ಥಿತಿ ನೆಲೆಸಿದೆ ಎಂದು ಸಮೀಕ್ಷೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News