42 ದಿನಗಳಲ್ಲಿ ಏಕಾಂಗಿಯಾಗಿ ನೌಕೆಯಲ್ಲಿ ವಿಶ್ವಪರ್ಯಟನೆ ಮಾಡಿದ ಸಾಹಸಿ

Update: 2017-12-17 17:39 GMT

ಬ್ರೆಸ್ಟ್(ಫ್ರಾನ್ಸ್), ಡಿ.17: ನೌಕೆಯಲ್ಲಿ ಏಕಾಂಗಿಯಾಗಿ ಹಾಗೂ ತಡೆರಹಿತವಾಗಿ ಕೇವಲ 42 ದಿನಗಳಲ್ಲಿ ವಿಶ್ವಪರ್ಯಟನೆ ಮಾಡುವ ಮೂಲಕ ಫ್ರೆಂಚ್ ಪ್ರಜೆ ಫ್ರಾಂಕೊಯಿಸ್ ಗ್ಯಾಬರ್ಟ್ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರು 42 ದಿನ, 16 ತಾಸು, 40 ನಿಮಿಷ ಹಾಗೂ 35 ಸೆಕೆಂಡುಗಳಲ್ಲಿ ತನ್ನ ವಿಶ್ವಪರ್ಯಟನೆಯನ್ನು ಪೂರ್ತಿಗೊಳಿಸಿದ್ದಾರೆ.

34 ವರ್ಷ ವಯಸ್ಸಿನ ನಾವಿಕರಾದ ಫ್ರಾಂಕೊಯಿಸ್, ಶನಿವಾರ ಮಧ್ಯರಾತ್ರಿ ಕಳೆದು ರವಿವಾರ 1:45 ನಿಮಿಷಕ್ಕೆ ಫ್ರಾನ್ಸ್‌ನ ವಾಯವ್ಯ ಕರಾವಳಿಯ ತುದಿಯಲ್ಲಿರುವ ಉಶಾಂತ್ ಹಾಗೂ ನೈಋತ್ಯ ಇಂಗ್ಲೆಂಡ್‌ನ ಲಿಝಾರ್ಡ್ ಪಾಯಿಂಟ್‌ನ್ನು ದಾಟುವ ಮೂಲಕ, ವಿಶ್ವದಾಖಲೆ ನಿರ್ಮಿಸಿದ್ದಾರೆ. ಕಳೆದ ವರ್ಷ 48 ದಿನ ಹಾಗೂ 10 ತಾಸುಗಳಲ್ಲಿ ನೌಕೆಯ ಮೂಲಕ ವಿಶ್ವಪರ್ಯಟನೆ ನಡೆಸಿದ ಥಾಮಸ್ ಕೊವಿಲೆ ಅವರ ದಾಖಲೆಯನ್ನು ಫ್ರಾಂಕೊಯಿಸ್ ಮುರಿದಿದ್ದಾರೆ.

ಇಬ್ಬರು ಮಕ್ಕಳ ತಂದೆಯಾದ ಗ್ಯಾಬೊರ್ಟ್, ನೌಕೆಯ ಮೂಲಕ ತಡೆರಹಿತವಾಗಿ ಏಕಾಂಗಿಯಾಗಿ ವಿಶ್ವಪರ್ಯಟನೆ ನಡೆಸಿದ ನಾಲ್ಕನೆ ವ್ಯಕ್ತಿಯೆನಿಸಿದ್ದಾರೆ.

 2014ರಲ್ಲಿ ಪ್ರಪ್ರಥಮ ಬಾರಿಗೆ ಈ ಸಾಹಸಯಾತ್ರೆಯನ್ನು ಕೈಗೊಂಡಿದ್ದ ಫ್ರೆಂಚ್ ಪ್ರಜೆ ಫ್ರಾನ್ಸಿಸ್ ಜೊಯೊನ್ ಎಂಬವರು 72 ದಿನ, 22 ತಾಸುಗಳಲ್ಲಿ ವಿಶ್ವಪರ್ಯಟನೆಯನ್ನು ಪೂರ್ತಿಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News