ಇರಾನ್‌ನಲ್ಲಿ ಭಾರೀ ವಾಯುಮಾಲಿನ್ಯ: ಶಾಲೆಗಳ ಮುಚ್ಚುಗಡೆ

Update: 2017-12-17 18:07 GMT

ಟೆಹರಾನ್,ಡಿ.17: ವಾಯಮಾಲಿನ್ಯ ಉಸಿರುಗಟ್ಟಿಸುವ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ರಾಜಧಾನಿ ಟೆಹರಾನ್ ಸೇರಿದಂತೆ ಇರಾನ್‌ನ ಕೆಲವು ಭಾಗಗಳಲ್ಲಿ ರವಿವಾರ ಖಾಸಗಿ ಶಾಲೆಗಳಿಗೆ ರಜೆ ಸಾರಲಾಗಿದೆ 1.40 ಕೋಟಿ ಜನಸಂಖ್ಯೆಯಿರುವ ಎರಡು ನಗರಗಳನ್ನು ಹೊರತುಪಡಿಸಿ ಟೆಹರಾನ್ ಪ್ರಾಂತದ ಎಲ್ಲಾ ಶಾಲೆಗಳು ರವಿವಾರ ಕಾರ್ಯನಿರ್ವಹಿಸುವುದಿಲ್ಲವೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶನಿವಾರ ಘೋಷಿಸಿದ್ದರು.

   ಕಳೆದ ಎರಡು ದಿನಗಳಲ್ಲಿ ದಟ್ಟವಾದ ಹೊಗೆ ರಾಜಧಾನಿಯ ಆಸುಪಾಸಿನ ಪ್ರದೇಶಗಳಲ್ಲಿ ಹರಡಿದ್ದು, ತೀವ್ರವಾದ ವಾಯುಮಾಲಿನ್ಯ ಉಂಟಾಗಿದೆ. ಈ ಮಧ್ಯೆ ಪ್ರಾಂತದ ಎಲ್ಲಾ ಗಣಿಗಳನ್ನು ಹಾಗೂ ಸಿಮೆಂಟ್ ಫ್ಯಾಕ್ಟರಿಗಳನ್ನು ಮುಚ್ಚುಗಡೆಗೊಳಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ ಹಾಗೂ ರಾಜಧಾನಿಯ ಕೇಂದ್ರಭಾಗದಲ್ಲಿ ಸಾರಿಗೆ ಸಂಚಾರಕ್ಕೂ ನಿರ್ಬಂಧಗಳನ್ನು ಹೇರಲಾಗಿದೆ.

ವೃದ್ಧರು, ಮಕ್ಕಳು, ಗರ್ಭಿಣಿಯರು ಹಾಗೂ ಹೃದಯ ಸಮಸ್ಯೆಗಳಿರುವವರು ಮನೆಯೊಳಗೆ ಉಳಿದುಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.

   ಪ್ರತಿ ವರ್ಷವೂ ಇರಾನ್‌ನಲ್ಲಿ ಚಳಿಗಾಲದ ಸಮಯದಲ್ಲಿ ಮಂಜಿನ ವಾತಾವರಣದಿಂದಾಗಿ ಧೂಳು, ಹೊಗೆ ಮೇಲಕ್ಕೇರದೆ, ವಾತಾವರಣದಲ್ಲಿ ಸಂಗ್ರಹಗೊಳ್ಳುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ. 2014ರಲ್ಲಿ ವಾಯುಮಾಲಿನ್ಯದ ಕಾರಣ ಟೆಹರಾನ್‌ನಲ್ಲಿ ಹೃದಯ ಹಾಗೂ ಉಸಿರಾಟದ ಸಮಸ್ಯೆಗಳಿಂದಾಗಿ 400 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News