ಗ್ಯಾಬೋನ್: ಜಿಯಾಗ್ರಾಫಿಕ್ ತಂಡದ ಸದಸ್ಯರಿಬ್ಬರ ಮೇಲೆ ಚೂರಿ ದಾಳಿ

Update: 2017-12-17 18:13 GMT

ಲಿಬರ್‌ವಿಲೆ,ಡಿ.17: ಮಧ್ಯ ಆಫ್ರಿಕದ ರಾಷ್ಟ್ರವಾದ ಗ್ಯಾಬೊನ್‌ನ ರಾಜಧಾನಿ ಲಿಬರೆವಿಲೆಯಲ್ಲಿ ರವಿವಾರ ದುಷ್ಕರ್ಮಿಯೊಬ್ಬ ಇಬ್ಬರು ಡೆನ್ಮಾಕ್ ಪ್ರಜೆಗಳ ಮೇಲೆ ಚೂರಿಯಿಂದ ದಾಳಿ ನಡೆಸಿ ಗಾಯಗೊಳಿಸಿದ್ದಾನೆ. ನ್ಯಾಶನಲ್ ಜಿಯೊಗ್ರಾಫಿಕ್ ಚಾನೆಲ್‌ಗಾಗಿ ಕೆಲಸ ಮಾಡುತ್ತಿದ್ದ ಇವರಿಬ್ಬರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಯು ಅವರ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾನೆಂದು ರಕ್ಷಣಾ ಸಚಿವ ಎಟಿನ್ ಮಸ್ಸಾರ್ದ್ ತಿಳಿಸಿದ್ದಾರೆ. ತಿಳಿಸಿದ್ದಾರೆ.

  ದಾಳಿಕೋರನು 53 ವರ್ಷದ ನೈಜೀರಿಯ ಪ್ರಜೆಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂಗೆ ಮಾನ್ಯತೆ ನೀಡಿರುವುದನ್ನು ಪ್ರತಿಭಟಿಸಿ ತಾನು ಈ ಕೃತ್ಯವನ್ನೆಸಗಿರುವುದಾಗಿ ಆತ ಪೊಲೀಸರಿಗೆ ತಿಳಿಸಿರುವುದಾಗಿ ಸಚಿವ ಮಸ್ಸಾರ್ದ್ ಮಾಹಿತಿ ನೀಡಿದ್ದಾರೆ.

ಇದೊಂದು ವಿರಳವಾದ ಕೃತ್ಯವೆಂದು ಪರಿಗಣಿಸಲಾಗಿದ್ದು, ತನಿಖೆ ನಡೆಯುತ್ತಿರುವುದಾಗಿ ಅರರು ಹೇಳಿದಾದರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News