ಜನರಿಕ್ ಔಷಧಿ- ಉಪನ್ಯಾಸ, ಸಂವಾದ ಕಾರ್ಯಕ್ರಮ
Update: 2017-12-18 20:24 IST
ಉಡುಪಿ, ಡಿ.18: ಉಡುಪಿ ಬಳಕೆದಾರರ ವೇದಿಕೆ ಹಾಗೂ ಉಡುಪಿ ಕಿನ್ನಿಮೂಲ್ಕಿಯ ಸದ್ಗುರು ಸೌಹಾರ್ದ ಸಹಕಾರಿ ನಿಯಮಿತ ಇದರ ಜಂಟಿ ಆಶ್ರಯದಲ್ಲಿ ಜೆನೆರಿಕ್ ಔಷಧಿ ಹಾಗೂ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಪರಿಯೋಜನೆ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಡಿ.21ರಂದು ಉಡುಪಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಕರ್ನಾಟಕ ವಲಯದ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ.ಬಿ.ಅನಿಲಾ ಭಾಗವಹಿಸಲಿದ್ದು, ಜೆನೆರಿಕ ಔಷಧಿ ಹಾಗೂ ಜನ ಔಷಧಿ ಕೇಂದ್ರದ ಉದ್ದೇಶ ಗಳ ಕುರಿತು ಮಾಹಿತಿ ಉಪನ್ಯಾಸ ನೀಡಲಿದ್ದಾರೆ.
ಬಳಿಕ ಅವರು ಸಂವಾದ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಡಿ.21ರ ಗುರುವಾರ ಸಂಜೆ 4 ಗಂಟೆಗೆ ಹೊಟೇಲ್ ಕಿದಿಯೂರಿನ ಮಹಾಜನ ಹಾಲ್‌ನಲ್ಲಿ ನಡೆಯಲಿದೆ.
ಆಸಕ್ತ ಸಾರ್ವಜನಿಕರು ಇದರಲ್ಲಿ ಭಾಗವಹಿಸಿ ಮಾಹಿತಿ ಪಡೆಯುವಂತೆ ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.