×
Ad

ಉತ್ತರಪ್ರದೇಶ: ಶಾಲೆಗಳಲ್ಲಿ ಕ್ರಿಸ್‌ಮಸ್ ಆಚರಣೆಗೆ ಹಿಂದೂ ಜಾಗರಣ್ ಮಂಚ್ ವಿರೋಧ

Update: 2017-12-18 20:38 IST

ಅಲಿಗಢ, ಡಿ. 18: ಕ್ರಿಸ್‌ಮಸ್ ಆಚರಿಸದಂತೆ ಉತ್ತರಪ್ರದೇಶ ಅಲಿಗಢದ ಶಾಲೆಗಳಿಗೆ ಹಿಂದೂ ಜಾಗರಣ್ ಮಂಚ್ ಎಚ್ಚರಿಸಿದೆ.ಕ್ರಿಸ್‌ಮಸ್ ಆಚರಣೆ ಧಾರ್ಮಿಕ ಮತಾಂತರದ ಒಂದು ಹೆಜ್ಜೆ ಎಂದು ಹಿಂದೂ ಜಾಗರಣ್ ಮಂಚ್‌ನ ಸದಸ್ಯ ಆರೋಪಿಸಿದ್ದಾರೆ.ಆಟಿಕೆ ಹಾಗೂ ಉಡುಗೊರೆ ನೀಡುವುದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹಿಂದೂ ಜಾಗರಣ್ ಮಂಚ್‌ನ ಅಧ್ಯಕ್ಷ ಸೋನು ಸವಿತಾ ಆರೋಪಿಸಿದ್ದಾರೆ.

ಕ್ರಿಸ್‌ಮಸ್ ಆಚರಣೆಯನ್ನು ಹಿಂದೂ ಮಕ್ಕಳ ಮೇಲೆ ಹೇರಬೇಡಿ. ಇದು ಧಾರ್ಮಿಕ ಮತಾಂತರಕ್ಕೆ ಕಾರಣವಾಗುತ್ತದೆ ಎಂದು ನಾವು ಶಾಲೆಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಸವಿತಾ ತಿಳಿಸಿದ್ದಾರೆ.ಈ ಚಟುವಟಿಕೆಗಳು ಮುಂದುವರಿದರೆ, ಶಾಲೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ನಿರ್ದೇಶನಗಳನ್ನು ಪಾಲಿಸುವಂತೆ ನಾವು ಈಗ ಶಾಲೆಗಳಿಗೆ ಮನವಿ ಮಾಡಿದ್ದೇವೆ. ಆದರೂ, ಇಂತಹ ಚಟುವಟಿಕೆಗಳನ್ನು ನಿಲ್ಲಿಸದೇ ಇದ್ದರೆ, ಪ್ರತಿಭಟನೆ ನಡೆಸಲಿದ್ದೇವೆ ಎಂದು ಸವಿತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News