×
Ad

‘ಆರೋಹಣ್’ ಸಿಎ ವಿದ್ಯಾರ್ಥಿಗಳ ಸಮ್ಮೇಳನ

Update: 2017-12-18 20:59 IST

ಮಂಗಳೂರು, ಡಿ.18: ಬೋರ್ಡ್ ಆಫ್ ಸ್ಟಡೀಸ್ ಐಸಿಎಐ, ಐಸಿಎಐನ ಎಸ್‌ಐಆರ್‌ಸಿ ಮಂಗಳೂರು ಘಟಕ ಮತ್ತು ಐಸಿಎಐನ ಸಿಕಾಸ ಮಂಗಳೂರು ಘಟಕದ ವತಿಯಿಂದ ನಗರದ ಟಿ.ವಿ. ರಮಣ ಪೈ ಹಾಲ್‌ನಲ್ಲಿ ಸೋಮವಾರ ‘ಆರೋಹಣ್’ ಸಿಎ ವಿದ್ಯಾರ್ಥಿಗಳ ಸಮ್ಮೇಳನ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ಜೆ.ಆರ್.ಲೊಬೋ ಲೆಕ್ಕ ಪರಿಶೋಧನಾ ಕ್ಷೇತ್ರದಲ್ಲಿ ವಿುಲ ಅವಕಾಶಗಳಿವೆ. ಕಠಿನ ಪರಿಶ್ರಮ ಇದ್ದಲ್ಲಿ ಮಾತ್ರ ಈ ಕ್ಷೇತ್ರದಲ್ಲಿ ಗುರಿ ಸಾಧನೆ ಸಾಧ್ಯ. ಗುರಿಯೆಡೆಗೆ ತಲುಪಲು ನಿರಂತರ ಶ್ರಮದೊಂದಿಗೆ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದರು.

 ಸಿಎ ಕಲಿಕೆ ಸುಲಭವಲ್ಲದಿದ್ದರೂ, ನಿರಂತರ ಶ್ರಮದಿಂದ ಈ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಬಹುದು. ಆಡಳಿತ ವ್ಯವಸ್ಥೆ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಲೆಕ್ಕ ಪರಿಶೋಧಕರ ಆವಶ್ಯಕತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಏಕಾಗ್ರತೆಯಿಂದ ಅಧ್ಯಯನ ನಡೆಸಿ ಈ ರಂಗದಲ್ಲಿ ಗೆಲುವು ಸಾಧಿಸಬೇಕಾದ ಗುರುತರ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದು ಜೆ.ಆರ್.ಲೋಬೋ ನುಡಿದರು.

ನಿಟ್ಟೆ ವಿವಿಯ ಪ್ರೊವೈಸ್ ಚಾನ್ಸ್‌ಲರ್ ಡಾ. ಎಂ. ಎಸ್. ಮೂಡಿತ್ತಾಯ ಉದ್ಘಾಟಿಸಿದರು. ಐಸಿಎಐ ಎಸ್‌ಐಆರ್‌ಸಿ ಮಂಗಳೂರು ಘಟಕದ ನಿರ್ಗಮನಾಧ್ಯಕ್ಷ ಕೇಶವ ಎನ್. ಬಳ್ಳಕುರಾಯ, ಉಪಾಧ್ಯಕ್ಷ ಶಿವಾನಂದ ಪೈ ಬಿ., ಐಸಿಎಐ ಸಿಕಾಸ ಮಂಗಳೂರು ಘಟಕದ ಉಪಾಧ್ಯಕ್ಷ ಮೆರ್ಸೀಟಾ ಬೆರ್ನಾ ಡಿಸೋಜ, ಕಾರ್ಯದರ್ಶಿ ರಾಡ್ನಿ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.

ಐಸಿಎಐನ ಎಸ್‌ಐಆರ್‌ಸಿ ಮಂಗಳೂರು ಘಟಕದ ಅಧ್ಯಕ್ಷ ಭಾರ್ಗವ ತಂತ್ರಿ ಪಿ. ಸ್ವಾಗತಿಸಿದರು. ಕಾರ್ಯದರ್ಶಿ ರವಿರಾಜ್ ಬಿ. ವಂದಿಸಿದರು. ಕೆ.ಎಸ್. ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News