×
Ad

ಸ್ವಯಂ ರಕ್ಷಣೆ ಹಾಗೂ ಪರಿಸರ ಕಾಳಜಿ ಕುರಿತು ಕಾರ್ಯಾಗಾರ

Update: 2017-12-18 21:04 IST

ಮಂಗಳೂರು, ಡಿ.18: ಕೆಂಜಾರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ (ಎಂ.ಸಿ.ಎಫ್) ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಸ್ವಯಂ ರಕ್ಷಣೆ ಮತ್ತು ಪರಿಸರ ಕಾಳಜಿ ಕುರಿತು ಕಾರ್ಯಗಾರ ನಡೆಯಿತು.

ಕಾರ್ಖಾನೆಗಳ ಇಲಾಖೆಯ ಉಪನಿರ್ದೇಶಕ ಎಚ್.ಎಸ್.ನರೇಂದ್ರ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎಂಸಿಎಫ್ ನಿರ್ದೇಶಕ ಕೆ. ಪ್ರಭಾಕರ ರಾವ್ ತಮ್ಮ ಕಾರ್ಖಾನೆ ಉತ್ಪಾದಿಸುವ ಬೇರೆ ಬೇರೆ ರೀತಿಯ ರಾಸಾಯನಿಕ ಗೊಬ್ಬರ, ಅವುಗಳ ಉಪಯೋಗ, ಬೇರೆ ಬೇರೆ ರೀತಿಯ ಮಣ್ಣು, ಮಣ್ಣಿಗೆ ಬೇಕಾಗುವ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.

ಎಂಸಿಎಫ್ ಕಾರ್ಖಾನೆಯ ವತಿಯಿಂದ ತರಬೇತಿಗಾಗಿ ತಯಾರಿಸಿದ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು. ಸುರಕ್ಷತಾ ಸಾಮಾಗ್ರಿಗಳ ಪ್ರದರ್ಶನ ಮಾಡಲಾಯಿತು. ನಿರ್ದೇಶಕ ಡಾ. ಕೆ.ಇ. ಪ್ರಕಾಶ್, ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಕೆ., ಉಪಸ್ಥಿತರಿದ್ದರು. ಎಂಸಿಎಫ್ ಸುರಕ್ಷಾ ವಿಭಾಗದ ಸಿಬ್ಬಂದಿ ಅರುಣ್ ಸ್ವಾಗತಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News